ನವದೆಹಲಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಸಂತಾಪ ನಿರ್ಣಯವನ್ನು ಅಂಗೀಕರಿಸಿತು. ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಸಂಪುಟವು ಡಾ.ಸಿಂಗ್ ಅವರಿಗೆ ಗೌರವ ಸಲ್ಲಿಸಿತು. ಜನವರಿ 1, 2025 ರವರೆಗೆ ಏಳು ದಿನಗಳ ರಾಜ್ಯ ಶೋಕಾಚರಣೆಯನ್ನ ಘೋಷಿಸಲಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ ಸೂಚಿಸಿದ್ದು, ಅವರನ್ನು ಶ್ರೇಷ್ಠ ರಾಜನೀತಿಜ್ಞ ಮತ್ತು ರಾಷ್ಟ್ರ ಜೀವನದಲ್ಲಿ ಛಾಪು ಮೂಡಿಸಿದ ವಿಶಿಷ್ಟ ನಾಯಕ ಎಂದು ಶ್ಲಾಘಿಸಿದೆ.
“ಡಾ.ಮನಮೋಹನ್ ಸಿಂಗ್ ಅವರು ನಮ್ಮ ರಾಷ್ಟ್ರೀಯ ಜೀವನದ ಮೇಲೆ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನಿಧನದಿಂದ ರಾಷ್ಟ್ರವು ಒಬ್ಬ ಶ್ರೇಷ್ಠ ರಾಜನೀತಿಜ್ಞ, ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಪ್ರಖ್ಯಾತ ನಾಯಕನನ್ನು ಕಳೆದುಕೊಂಡಿದೆ” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಹೊಸ ವರ್ಷಕ್ಕೆ ಹೊಸ ರೂಲ್ಸ್ ; ಜನವರಿ 1ರಿಂದ ಬದಲಾಗಲಿರುವ ಪ್ರಮುಖ ನಿಯಮಗಳಿವು.!
ಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲುಗಳು ಸಂಚಾರ
‘ಟೀ ಬ್ಯಾಗ್’ ಬಳಸ್ತೀರಾ.? ಎಚ್ಚರ, ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ : ಅಧ್ಯಯನ