ಬೆಂಗಳೂರು : ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಏಪ್ರಿಲ್ 18 ಮತ್ತು 19 ರಂದು ನಡೆಯಲಿರುವ ಸಿಇಟಿ ಪರೀಕ್ಷೆಯ ಪ್ರವೇಶ ಪತ್ರಗಳು ಡೌನ್ ಲೋಡ್ ಆಗುತ್ತಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಯುಜಿಸಿಇಟಿ 2024ಕ್ಕೆ ಸಂಬಂಧಿಸಿದಂತೆ ಯುಜಿನೀಟ್ ಅನ್ನು ಮಾತ್ರ ಆಯ್ಕೆ ಮಾಡಿರುವ ಅಭ್ಯರ್ಥಿಗಳಿಗೆ ಸಿಇಟಿ ಪ್ರವೇಶ ಪತ್ರ ಡೌನ್‌ಲೋಡ್ ಆಗುವುದಿಲ್ಲ. ಸದರಿ ಅಭ್ಯರ್ಥಿಗಳಿಗೆ ನೀಟ್ ಸೀಟು ಹಂಚಿಕೆಯಲ್ಲಿ (ವೈದ್ಯಕೀಯ/ದಂತವೈದ್ಯಕೀಯ/ಆಯುಷ್) ಭಾಗವಹಿಸಲು ಅವಕಾಶವಿರುತ್ತದೆ ಎಂದು ತಿಳಿಸಿದೆ.