ನವದೆಹಲಿ: ದಕ್ಷಿಣ ಗಾಜಾ ಪಟ್ಟಿಯ ರಾಫಾ ಬಳಿ ಇಸ್ರೇಲ್ ನಡೆಸಿದ ಮಾರಣಾಂತಿಕ ವೈಮಾನಿಕ ದಾಳಿಯ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಮಂಗಳವಾರ ತುರ್ತು ಸಭೆ ನಡೆಸಲಿದೆ.
ತುರ್ತು ಸಭೆಯನ್ನು ಅಲ್ಜೀರಿಯಾ ವಿನಂತಿಸಿದೆ ಮತ್ತು ಸ್ಲೊವೇನಿಯಾ ಬೆಂಬಲಿಸಿದೆ ಎಂದು ರಾಜತಾಂತ್ರಿಕರು ಸೋಮವಾರ ತಿಳಿಸಿದ್ದಾರೆ.
ಸ್ಥಳಾಂತರಗೊಂಡ ಜನರ ಡೇರೆಗಳ ಮೇಲೆ ಭಾನುವಾರ ನಡೆದ ವೈಮಾನಿಕ ದಾಳಿಯಲ್ಲಿ 45 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಗಾಝಾದಲ್ಲಿ ಹಮಾಸ್ ನಡೆಸುತ್ತಿರುವ ಆರೋಗ್ಯ ಪ್ರಾಧಿಕಾರ ತಿಳಿಸಿದೆ. ವೈಮಾನಿಕ ದಾಳಿಯಲ್ಲಿ ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಆರೋಗ್ಯ ಪ್ರಾಧಿಕಾರ ಹೇಳಿದೆ, ಈ ಘಟನೆಯನ್ನು “ಹತ್ಯಾಕಾಂಡ” ಎಂದು ಬಣ್ಣಿಸಿದೆ.