ಬೆಂಗಳೂರು: ಯುಜಿ ಸಿಇಟಿ-2024ರ ಪರೀಕ್ಷೆಯನ್ನು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿತ್ತು. ಈ ಬೆನ್ನಲ್ಲೇ ದಾಖಲಾತಿ ಪರಿಶೀಲನೆಗೆ ಮಹತ್ವದ ಮಾಹಿತಿಯನ್ನು ಅಭ್ಯರ್ಥಿಗಳಿಗೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕೆಇಎ, ಆನ್ಲೈನ್ ಅರ್ಜಿಯಲ್ಲಿ ವಿವಿಧ ಮೀಸಲಾತಿಗಳನ್ನು ಕ್ಷೇಮ್ ಮಾಡಿದ್ದಲ್ಲಿ ಮಾತ್ರ ಪರಿಗಣಿಸಲಾಗಿರುತ್ತದೆ. ಯುಜಿಸಿಇಟಿ-2024 ಕ್ಕೆ ಅಭ್ಯರ್ಥಿಗಳು http://kea.kar.nic.in ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ SATS ಸಂಖ್ಯೆಯನ್ನು ಆಧರಿಸಿ ಅಭ್ಯರ್ಥಿಗಳ ವ್ಯಾಸಂಗ, ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗದ ವಿವರಗಳನ್ನು ಮತ್ತು ಆರ್ಡಿ ಸಂಖ್ಯೆಯನ್ನು ಆಧರಿಸಿ ಮೀಸಲಾತಿ [ಎಸ್ಸಿ, ಎಸ್ಟಿ, ಪ್ರವರ್ಗ-1, 2ಎ, 2ಬಿ, 3ಎ, 3ಬಿ] 371(ಜೆ), ಧಾರ್ಮಿಕ ಅಲ್ಪ ಸಂಖ್ಯಾತ, ಎನ್ಎಲ್ಸಿ ಮತ್ತು ಇತರೆ ಮಾಹಿತಿಯನ್ನು ಆಯಾ ಇಲಾಖೆಯ ವೆಬ್ಸರ್ವೀಸ್ ಮೂಲಕ ಪರಿಶೀಲನೆ ಮಾಡಲಾಗಿರುತ್ತದೆ ಎಂದಿದೆ.
ಅರ್ಹತಾ ಕಂಡಿಕೆ ಇ, ಎಫ್, ಜಿ, ಹೆಚ್ ಮತ್ತು ಒ ಕ್ಲಾಸ್ಗಳಿಗೆ ಅನ್ವಯಿಸುವಂತೆ ಆಯಾ ಇಲಾಖೆಯವರು ಪರಿಶೀಲಿಸಿ ನೀಡಿದಂತೆ ಅರ್ಹತೆಯನ್ನು ಪರಿಗಣಿಸಲಾಗಿದೆ. ಅಭ್ಯರ್ಥಿಗಳು ನಿಗದಿತ ಲಿಂಕ್ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ, ಪರಿಶೀಲಿಸಿದ ವಿವರಗಳನ್ನು ನೋಡಬಹುದಾಗಿದೆ. ವೆರಿಫಿಕೇಶನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಅನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಸದ್ಯದಲ್ಲಿಯೇ ನೀಡಲಾಗುವುದು.
ಡೌನ್ ಲೋಡ್ ಮುಂದಿನ ಹಂತಗಳು
ಪ್ರಕಟಿಸಲಾಗುವ ವೇಳಾಪಟ್ಟಿಯನುಸಾರ ವೆರಿಫಿಕೇಶನ್ ಮಾಡಿಕೊಳ್ಳುವುದು; ಆದ್ಯತಾ ಕ್ರಮದಲ್ಲಿ ಆಸಕ್ತಿ ಇರುವ ಕಾಲೇಜು ಮತ್ತು ಕೋರ್ಸುಗಳ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಳ್ಳುವುದು; ಮೊದಲನೇ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದ ನಂತರ ಪ್ರಾಧಿಕಾರದ ವೆಬ್ಸೈಟಿನ ಲಿಂಕ್ನಲ್ಲಿ Options ಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸುವುದು.
ಗಮನಿಸಿ: ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಮ್, ಎನ್, ಜೆಡ್, ಗಳನ್ನು ನಮೂದಿಸಿರುವ ಅಭ್ಯರ್ಥಿಗಳಿಗೆ ಆಫ್ಲೈನ್ ಪರಿಶೀಲನೆಗೆ ಹಾಜರಾಗಲು ಪ್ರತ್ಯೇಕ ವೇಳಾಪಟ್ಟಿಯನ್ನು ನೀಡಿ ಪರಿಶೀಲನೆ ಮಾಡಲಾಗಿರುತ್ತದೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ವೆರಿಫಿಕೇಶನ್ ಸ್ಲಿಪ್ ನೀಡಲಾಗಿದೆ. ಈ ಅಭ್ಯರ್ಥಿಗಳು ಮೇಲಿನ ಲಿಂಕ್ ಅನ್ನು ಪರಿಶೀಲಿಸಬೇಕಾಗಿಲ್ಲ ಮತ್ತು ಆಫ್ಲೈನ್ ಪರಿಶೀಲನೆಗೆ ಗೈರು ಹಾಜರಾಗಿರುವ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಅರ್ಹತೆ ಪಡೆಯುವುದಿಲ್ಲ ಎಂದಿದೆ.
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರವೇ ‘ವಂದೇ ಭಾರತ್’ ಸೇರಿ ಎಲ್ಲಾ ರೈಲುಗಳ ‘ಟಿಕೆಟ್ ದರ’ ಇಳಿಕೆ
BIG NEWS: ‘ಶಿಕ್ಷಣ ಸಚಿವ’ರ ಕ್ಷೇತ್ರದಲ್ಲೇ ಲಂಚಾವತಾರ: ‘ಪೋನ್ ಪೇ’ ಮೂಲಕವೇ ‘SDA ಲಂಚ ಸ್ವೀಕಾರ’