ಬೆಂಗಳೂರು: ಯುಜಿ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆ.16ರೊಳಗೆ ತಮಗೆ ಸೂಕ್ತ ಅನಿಸುವ ಛಾಯ್ಸ್ ಆಯ್ಕೆ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ.
ಸೀಟು ಹಂಚಿಕೆಯಾಗಿರುವವರಿಗೆ ಛಾಯ್ಸ್-1, 2 ಮತ್ತು ಛಾಯ್ಸ್ -4 ಆಯ್ಕೆಗೆ ಅವಕಾಶ ನೀಡಲಾಗಿದೆ. ಸೆ.15ರಂದು ಮಧ್ಯಾಹ್ನ 2ರಿಂದ ಸೆ.16ರಂದು ಮಧ್ಯಾಹ್ನ 1ರವರೆಗೆ ಛಾಯ್ಸ್ ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್ ಆಯ್ಕೆಗೂ ಮುನ್ನ ಪೋಷಕರ ಜತೆ ಚರ್ಚಿಸಿ ತೀರ್ಮಾನಿಸಲು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಸಲಹೆ ನೀಡಿದ್ದಾರೆ.
ಛಾಯ್ಸ್- 1 ಮತ್ತು ಛಾಯ್ಸ್-2 ಆಯ್ಕೆ ಮಾಡಿದವರು ಸೆ.16ರೊಳಗೆ ಶುಲ್ಕ ಪಾವತಿಸಬೇಕು. ಛಾಯ್ಸ್-1 ಆಯ್ಕೆ ಮಾಡಿದವರು ಸೆ.16ರೊಳಗೆ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗಳ ಮೌಲ್ಯವನ್ನೇ ‘ಬ್ರೇಕಿಂಗ್ ನ್ಯೂಸ್’ ಕಸಿಯುತ್ತಿದೆ: ಸಚಿವ ಶಿವರಾಜ್ ತಂಗಡಗಿ ಕಳವಳ
ಶಿವಮೊಗ್ಗ: ಸಾಗರದ ‘ಗಣಪತಿ ಬ್ಯಾಂಕ್’ನಿಂದ ಗ್ರಾಹಕ ಸ್ನೇಹಿ ಯೋಜನೆ ಜಾರಿ- ಅಧ್ಯಕ್ಷ ಆರ್.ಶ್ರೀನಿವಾಸ್