ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ 40 ವರ್ಷದ ಟೈಲರ್ ಕನ್ಹಯ್ಯಾ ಲಾಲ್ ಅವರ ಬರ್ಬರ ಹತ್ಯೆಯ ಬಗ್ಗೆ ನಡೆಯುತ್ತಿರುವ ತನಿಖೆಯು ಆರೋಪಿ ರಿಯಾಜ್ ಅಟ್ಟಾರಿ ಅವರ ಬೈಕ್ ನೋಂದಣಿ ಸಂಖ್ಯೆ ಬೆಚ್ಚಿ ಬೀಳಿಸಿದೆ. ಆ ಸಂಖ್ಯೆ ಪಡೆಯೋದಕ್ಕಾಗಿ ಆತ ನೀಡಿದ ಹಣ ಎಷ್ಟು ಎನ್ನುವ ಬಗ್ಗೆ ಮುಂದೆ ಸುದ್ದಿ ಓದಿ..

ರಾಜಸ್ಥಾನದ ಉದಯ ಪುರದಲ್ಲಿ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಂತ ಟೈಲರ್ ಶಿರಚ್ಛೇತನ ಮಾಡಲಾಗಿತ್ತು. ಹೀಗೆ ಮಾಡಿದಂತ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕುತೂಹಲಕಾರಿ ವಿಷಯ, ಅಚ್ಚರಿ, ಬೆಚ್ಚಿ ಬೀಳಿಸೋ ಮಾಹಿತಿ ಅಂದ್ರೇ, ಟೈಲರ್ ತಲೆ ಕಡಿದಂತ ಆರೋಪಿ ರಿಯಾಜ್ ಅಟ್ಟಾರಿ ಖರೀದಿಸಿದಂತ ಬೈಕ್ ನೊಂದಣಿ ಸಂಖ್ಯೆ 26/11 ಮುಂಬೈ ಭಯೋತ್ಪಾದಕ ದಾಳಿಯೊಂದಿಗೆ ಸಂಪರ್ಕ ಹೊಂದಿದೆ ಎಂದು ಬಹಿರಂಗಪಡಿಸಿದೆ ಎಂದು ಇಂಡೋ-ಏಷ್ಯನ್ ನ್ಯೂಸ್ ಸರ್ವೀಸ್ (ಐಎಎನ್ಎಸ್) ವರದಿ ಮಾಡಿದೆ.

ಇವಿ ವಾಹನಗಳ ವೆಚ್ಚ ಜನಸಾಮಾನ್ಯರ ಕೈಗೆ ನಿಲುಕುವಂತಿರಬೇಕು – ಸಿಎಂ ಬಸವರಾಜ ಬೊಮ್ಮಾಯಿ

2011ರ ನವೆಂಬರ್ 26ರಂದು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಳ್ಳಲು ಅಟ್ಟಾರಿ ಅವರ ಆರ್ಜೆ 27 ಎಎಸ್ 2611 ಬೈಕನ್ನು ಅವರು ಖರೀದಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ತಂಡವು ಬೈಕ್ ಖರೀದಿಯ ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದೆ. ಆರೋಪಿಗಳು ವಿಶೇಷ ಸಂಖ್ಯೆಯನ್ನು ಹೇಗೆ ತೆಗೆದುಕೊಂಡರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. 2013 ರಲ್ಲಿ ಹೆಚ್ಚುವರಿಯಾಗಿ 5,000 ರೂ.ಗಳನ್ನು ಜಮಾ ಮಾಡಿದ ನಂತರ ಬೈಕ್ ಸಂಖ್ಯೆ 2611 ಅನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಜೂನ್ 28ರಂದು ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ಎಂಬವರು ದರ್ಜಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು.

2013ರ ಮಾರ್ಚ್ನಲ್ಲಿ ಖರೀದಿಸಿದ್ದ ಮೋಟಾರ್ಸೈಕಲ್ಗೆ ತನ್ನ ಆಯ್ಕೆಯ ಸಂಖ್ಯೆಯನ್ನು ಪಡೆಯಲು ಅಖ್ತರಿ 1000 ರೂ.ಗಳನ್ನು ಪಾವತಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿ ಮಾಡಿದೆ.

BIG NEWS: ಈ ಕೂಡಲೇ ಮಾಜಿ ಶಾಸಕ ರಾಜಣ್ಣ ಕ್ಷಮೆಯಾಚಿಸಬೇಕು – ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಡಕ್ ಸೂಚನೆ

“ಅವರು ಪರಾರಿಯಾಗುತ್ತಿದ್ದ ಬೈಕ್ನ ನೋಂದಣಿ ಸಂಖ್ಯೆ ಆರ್ಜೆ 27 ಎಎಸ್ 2611 ಆಗಿತ್ತು. ಮುಂದಿನ ಕ್ರಮಕ್ಕಾಗಿ ಮೋಟಾರ್ಸೈಕಲ್ ಅನ್ನು ಎಸ್ಐಟಿಗೆ ಹಸ್ತಾಂತರಿಸಲಾಗಿದೆ” ಎಂದು ಭೀಮ್ ಪೊಲೀಸ್ ಠಾಣೆಯ ಎಸ್ಎಚ್ಒ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಏತನ್ಮಧ್ಯೆ, ಉದಯಪುರ ಆರ್ಟಿಒ ಪ್ರಭು ಲಾಲ್ ಬಮ್ನಿಯಾ ಅವರು ಈ ಮೋಟಾರ್ಸೈಕಲ್ ಅನ್ನು ಅಖ್ತರಿ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಮಾರ್ಚ್ 2013 ರಲ್ಲಿ ಸಂಖ್ಯೆಯನ್ನು ಪಡೆಯಲು 1000 ರೂ.ಗಳ ಶುಲ್ಕವನ್ನು ಪಾವತಿಸಲಾಗಿದೆ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ನವೆಂಬರ್ 26, 2008 ರಂದು, 10 ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಬಂದು ವಿವೇಚನಾರಹಿತವಾಗಿ ಗುಂಡು ಹಾರಿಸಿ 166 ಜನರನ್ನು ಕೊಂದರು.

Share.
Exit mobile version