ಹುಬ್ಬಳ್ಳಿ: ನೇಹಾಳ ಹತ್ಯೆ ಖಂಡಿಸಿ ಹಳೆ ಹುಬ್ಬಳ್ಳಿಯಲ್ಲಿ ಪ್ರತಿಭಟನ ಕಾರರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭೀಕರವಾಗಿ ಹತ್ಯೆಯಾದ ನೇಹಾಳಿಗೆ ರಾಜ್ಯ ಸರ್ಕಾರದಿಂದ ಅನ್ಯಾಯವಾಗುತ್ತಿದ್ದು, ಆಕೆಯ ಸಾವಿಗೆ ನ್ಯಾಯ ದೊರಕಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.
ಇದಲ್ಲದೇ ಸಿಎಂ ಮತ್ತು ಡಿಸಿಎಂ ವಿರುದ್ದ ಕೂಡ ಕಿಡಿಕಾರಿದ ಪ್ರತಿಭಟನ ಕಾರರು ಇಬ್ಬರ ಹೇಳಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ರಾಜ್ಯದ ನಾನಾ ಭಾಗಗಳಲ್ಲಿ ಇಂದು ಬಿಜೆಪಿಯಿಂದ ನೇಹಾಳ ಕೊಲೆ ವಿರೋಧಿಸಿ ಆಕೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದೆ. ಈ ನಡುವೆ ಮೈಸೂರಿನಲ್ಲಿ ಬಿಜೆಪಿ ಕೂಡ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಬಿ.ವೈ ವಿಜೇಂಯೇಂದ್ರ ಅವರು ಈಗಾಗಲೇ ಮೈಸೂರಿನಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿದ್ದಾರೆ. ಆದರೆ ಇನ್ನೂ ಕೂಡ ಪ್ರತಿಭಟನೆಗೆ ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ.