ಚಿಕ್ಕಮಗಳೂರು: ರಾಜ್ಯಾಧ್ಯಂತ ಮಳೆ ( Rain ) ಇಂದಿನಿಂದ ಇಳಿಮುಖವಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬೆನ್ನಲ್ಲೇ ಮಳೆಯಿಂದಾಗಿ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮನೆಯ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.

BREAKING NEWS: ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಗೂ ಕೊರೋನಾ ಪಾಸಿಟಿವ್ | Mallikarjuna

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆ ತಲಗೂರು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಮರವೊಂದು ಮುರಿದು ಮನೆಯ ಮೇಲೆ ಬಿದ್ದಿದೆ. ಈ ಪರಿಣಾಮ, ಮನೆಯಲ್ಲಿದ್ದಂತ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇನ್ಮುಂದೆ ‘ಎಲ್ಲಾ ಎಲೆಕ್ಟ್ರಾನಿಕ್ ಉಪಕರಣ’ಕ್ಕೂ ಒಂದೇ ಮಾದರಿಯ ‘ಚಾರ್ಜರ್’.! | One charger for all gadgets

ಮೃತರನ್ನು ಸರಿತಾ (37) ಹಾಗೂ ಚಂದ್ರಮ್ಮ (55) ಎಂಬುದಾಗಿ ಗುರುತಿಸಲಾಗಿದೆ. ಮಳೆಯೊಂದಿಗೆ ಭಾರಿ ಗಾಳಿ ಬೀಸಿದ ಪರಿಣಾಮ, ಮನೆಯ ಪಕ್ಕದಲ್ಲಿದ್ದಂತ ಮರ ಮುರಿದು, ಮನೆಯ ಮೇಲೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ದುರ್ಮರಣ ಹೊಂದಿರೋದಾಗಿ ತಿಳಿದು ಬಂದಿದೆ.

ಇಂದಿನಿಂದ ರಾಜ್ಯದಲ್ಲಿ ತಗ್ಗಲಿದೆ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯ ( Heavy Rain ) ಆರ್ಭಟ, ಇಂದಿನಿಂದ ಕಡಿಮೆಯಾಗಲಿದೆ. ರಾಜ್ಯದಲ್ಲಿ ಇಂದಿನಿಂದ ಮುಂದಿನ ಭಾನುವಾರದವರೆಗೆ ಅತಿ ಭಾರಿ ಮಳೆಯ ಸಾಧ್ಯತೆಗಳಿಲ್ಲ ಎಂಬುದಾಗಿ ಹವಾಮಾನ ಇಲಾಖೆ ( Weather department forecast ) ಮುನ್ಸೂಚನೆ ನೀಡಿದೆ.

BIG NEWS: ‘ಅನುಕಂಪದ ಆಧಾರ’ದಲ್ಲಿ ನೇಮಕಗೊಂಡವರು ಅರ್ಹತೆಯನ್ನು ಹೊಂದುವಲ್ಲಿ ವಿಫಲವಾದ್ರೇ ‘ಕೆಲಸ’ದಿಂದ ತಗೆಯಬಹುದು- ಸುಪ್ರೀಂ ಕೋರ್ಟ್

ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ಬೆಳಿಗ್ಗೆ 8.30ರ ತನಕ ಮಲೆನಾಡಿನ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಕಾರಣ, ಆರೆಂಜ್ ಅಲರ್ಟ್ ನೀಡಿದೆ. ಇತರೆ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಕಾರಣ, ಯೆಲ್ಲೋ ಅಲರ್ಟ್ ನೀಡಿದೆ.

BIG NEWS: ಇಂದು ಮಧ್ಯಾಹ್ನ 2ಕ್ಕೆ ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್, ಡಿಸಿಎಂ ಆಗಿ ತೇಜಸ್ವಿಯಾದವ್ ಪ್ರಮಾಣವಚನ ಸ್ವೀಕಾರ | Bihar Political Crisis

ಅಂದಹಾಗೇ ಕಳೆದ 24 ಗಂಟೆಯ ಅವಧಿಯಲ್ಲಿ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು. ಈ ಪರಿಣಾಮ, ಉಡುಪಿಯ ಕೊಲ್ಲೂರು, ಉತ್ತರ ಕನ್ನಡದ ಕಾಸಲ್ ರಾಕ್, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 19 ಸೆಂ. ಮೀ ಮಳೆಯಾಗಿದೆ.

ಶಿವಮೊಗ್ಗದ ಹುಂಚದಕಟ್ಟೆ 13 ಸೆ.ಮೀ, ಚಿಕ್ಕಮಗಳೂರಿನ ಕಳಸ 12, ಲಿಂಕನಮಕ್ಕಿ 11, ಉತ್ತರ ಕನ್ನಡದ ಗೇರುಸೊಬ್ಬ ಹಾಗೂ ಪೊನ್ನಂಪೇಟೆಯಲ್ಲಿ ತಲಾ 10 ಸೆಂ. ಮೀಟರ್ ಮಳೆಯಾಗಿದೆ.

Share.
Exit mobile version