ಉತ್ತರ ಪ್ರದೇಶ: 121 ಜನರು ಸಾವನ್ನಪ್ಪಿದ ಹತ್ರಾಸ್ ಕಾಲ್ತುಳಿತ ದುರಂತದಲ್ಲಿ ಆರು ಜನರನ್ನು ಬಂಧಿಸಲಾಗಿದೆ ಎಂದು ಹತ್ರಾಸ್ ಪೊಲೀಸರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಲ್ತುಳಿತಕ್ಕೆ ಕಾರಣವಾದ ನಿರ್ಲಕ್ಷ್ಯಕ್ಕಾಗಿ ಬಂಧಿಸಲ್ಪಟ್ಟ ಆರು ಜನರಲ್ಲಿ ಕಾರ್ಯಕ್ರಮದ ಸಂಘಟಕರೂ ಸೇರಿದ್ದಾರೆ ಎಂದು ಅಲಿಗಢದ ಐಜಿ ಶಲಭ್ ಮಾಥುರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಪೇಂದ್ರ, ಮಂಜು ಯಾದವ್ ಮತ್ತು ಮುಖೇಶ್ ಕುಮಾರ್ ಬಂಧಿತರಲ್ಲಿ ಸೇರಿದ್ದಾರೆ. ಬಂಧಿತ ಆರು ಜನರು ಘಟನೆಯ ನಂತರ ತಕ್ಷಣ ಪರಾರಿಯಾಗಿದ್ದಾರೆ ಮತ್ತು ತನಿಖೆಗೆ ಸಹಕರಿಸಲಿಲ್ಲ ಎಂದು ಪೊಲೀಸರು ಆರೋಪಿಸಿದ್ದಾರೆ.