ಹಾವೇರಿ: ಚಲಿಸುತ್ತಿದ್ದಂತ ಸಾರಿಗೆ ಬಸ್ ನ ಎರಡು ಚಕ್ರಗಳು ಕಳಚಿ ಬಿದ್ದ ಕಾರಣ, ಭಾರೀ ಅನಾಹುತವೇ ಆಗಬೇಕಿದ್ದದ್ದು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿರುವಂತ ಘಟನೆ ಹಾವೇರಿಯ ನಾಗನೂರಿನಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ನಾಗನೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಾರಿಗೆ ಬಸ್ಸಿನ ಎರಡು ಚಕ್ರಗಳು ದಿಢೀರ್ ಕಳಚಿ ಬಿದ್ದಿದ್ದಾವೆ. ಈ ಪರಿಣಾಮ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಕೂಡಲೇ ಸಮಯ ಪ್ರಜ್ಞೆಯನ್ನು ಮೆರೆದಂತ ಚಾಲಕ ಬಸ್ ನಿಲ್ಲಿಸಿ, ಮುಂದಾಗಲಿದ್ದಂತ ಭಾರೀ ಅನಾಹುತವನ್ನೇ ತಪ್ಪಿಸಿದ್ದಾರೆ.
ಅಂದಹಾಗೇ ಹುಬ್ಬಳ್ಳಿ ಕಡೆಯಿಂದ ಹಾವೇರಿಗೆ ಸಾರಿಗೆ ಬಸ್ ತೆರಳುತ್ತಿತ್ತು. ಈ ವೇಳೆಯಲ್ಲಿ ನಾಗನೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಾರಿಗೆ ಬಸ್ಸಿನ 2 ಚಕ್ರಗಳು ಕಳಚಿ ಬಿದ್ದಿದ್ದವು. ಇದರಲ್ಲಿ 40 ಪ್ರಯಾಣಿಕರಿದ್ದರು. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಈ ಸಂಬಂಧ ಹಾವೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG BREAKING: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ FIR ದಾಖಲು | HD Kumaraswamy