ಉತ್ತರ ಕನ್ನಡ: ಜಿಲ್ಲೆಯಲ್ಲಿ ಸಮುದ್ರಕ್ಕೆ ಆಟವಾಡಲು ಇಳಿದು, ಸುಳಿಗೆ ಸಿಲುಕಿ ನೀರು ಪಾಲಾಗುತ್ತಿದ್ದಂತ ಇಬ್ಬರನ್ನು ಜೀವ ರಕ್ಷಕರು ರಕ್ಷಿಸಿರುವಂತ ಘಟನೆ ಗೋಕರ್ಣದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿ ಸಮುದ್ರಕ್ಕೆ ಇಳಿದಿದ್ದಂತ ರಷ್ಯಾದ ಇಬ್ಬರು ಪ್ರಜೆಗಳು ಸುಳಿಗೆ ಸಿಲುಕಿ ನೀರು ಪಾಲಾಗುತ್ತಿದ್ದರು. ಈ ವೇಳೆಯಲ್ಲಿ ಅಲ್ಲೇದ ಇದ್ದಂತ ಜೀವ ರಕ್ಷಕ ಸಿಬ್ಬಂದಿಗಳಾದಂತ ನಾಗೇಂದ್ರ ಕುರ್ಲೆ, ಮಂಜುನಾಥ್ ಎಂಬುವರು ರಕ್ಷಿಸಿದ್ದಾರೆ.
ಸಮುದ್ರದ ಸುಳಿಗೆ ಸಿಲುಕಿ ನೀರು ಪಾಲಾಗುತ್ತಿದ್ದಂತ ರಷ್ಯಾದ ಇರೀನಾ ಹಾಗೂ ಅನ್ಯ ಎಂಬುವರನ್ನು ರಕ್ಷಿಸಿದ ಪರಿಣಾಮ, ಇಬ್ಬರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.
ಸಿ.ಡಿ ರವಿ ತಮ್ಮ ತಪ್ಪನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ: ಸಿಎಂ ಸಿದ್ಧರಾಮಯ್ಯ