ಕೋಲಾರ: ಜಿಲ್ಲೆಯಲ್ಲಿ ಶಾಲೆಗೆಂದು ಹೋದಂತ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವಂತ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ನರಸಾಪುರ ಗ್ರಾಮದ ಶರಣ್ಯ ಹಾಗೂ ದೇವಿ ಎಂಬ ವಿದ್ಯಾರ್ಥಿನಿಯರೇ ನಾಪತ್ತೆಯಾಗಿರುವಂತವರಾಗಿದ್ದಾರೆ.
ಈ ಇಬ್ಬರು ವಿದ್ಯಾರ್ಥಿನಿಯರು ನಿನ್ನೆಯ ಶುಕ್ರವಾರದಂದು ಬೆಳಗ್ಗೆ ಶಾಲೆಗೆಂದು ತೆರಳಿದ್ದರು. ಆದರೇ ಇದುವರೆಗೆ ಮನೆಗೆ ವಾಪಾಸ್ಸಾಗಿಲ್ಲ. ಹೀಗಾಗಿ ಇಡೀ ದಿನ ಅವರನ್ನು ಪೋಷಕರು ಹುಡುಕಾಡಿದ್ದಾರೆ. ಆದರೇ ದೊರೆತಿಲ್ಲ. ಹೀಗಾಗಿ ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ರಾತ್ರಿಯಾದರೂ ಇಬ್ಬರು ಮಕ್ಕಳು ವಾಪಾಸ್ ಆಗದ ಕಾರಣ ಕೋಲಾರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ನಾಪತ್ತೆಯಾಗಿರುವಂತ ಇಬ್ಬರು ವಿದ್ಯಾರ್ಥಿನಿಯರು 10ನೇ ತರಗತಿ ಓದುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.
BIG NEWS: ಕರ್ನಾಟಕದಲ್ಲಿ ‘ಹಲಾಲ್ ಸರ್ಟಿಫಿಕೇಟ್’ ನಿಷೇಧಿಸಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಯತ್ನಾಳ್ ಪತ್ರ
BREAKING : ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರ : ರಾಜ್ಯ ಸರ್ಕಾರ & ‘GBA’ ಗೆ ಹೈಕೋರ್ಟ್ ನೋಟಿಸ್ ಜಾರಿ








