ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಸಮೀಪದ ಶಿರಾಳಕೊಪ್ಪ ರಸ್ತೆಯ ಕರ್ಜಿಕೊಪ್ಪ ಬಳಿಯಲ್ಲಿ ಕ್ಯಾಂಟರ್ ಮೇಲೆ ಮರ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ಯಾಂಟರ್ ಚಾಲನೆ ಮಾಡುತ್ತಿದ್ದಂತ ಹನುಮಂತಪ್ಪ ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲದೇ ವೀರೇಶ್ ಎಂಬಾತನ ಕೆನ್ನೆಗೆ ಗಾಯವಾಗಿದೆ. ಮತ್ತೊಬ್ಬ ಕೂಲಿ ಕಾರ್ಮಿಕರ ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಸಾಗರಕ್ಕೆ ಕರೆದೊಯ್ಯಲಾಗಿದೆ.
ಸ್ಥಳದಲ್ಲಿ ಖುದ್ದು ನಿಂತು RFO ಮರ ತೆರವು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉಳವಿಯ ಉಪ ವಲಯ ಅರಣ್ಯಾಧಿಕಾರಿ ಯೊಗೇಶ್, ಅರಣ್ಯ ಗಸ್ತು ಪಾಲಕ ಪ್ರವೀಣ್ ಜೊತೆಗೂಡಿ ಸೊರಬ ಆರ್ ಎಫ್ ಓ ಜಾವೆಧ್ ಬಾಷ ಅಂಗಡಿ ಅವರು ಸಿಬ್ಬಂದಿಗಳೊಂದಿಗೆ ಮರ ತೆರವುಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಕೆಲ ದಿನಗಳಿಂದ ಸೊರಬ ತಾಲ್ಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಕಾರಣ ಮರದ ಬುಡ ಸಡಿಲಗೊಂಡು ಕ್ಯಾಂಟರ್ ಮೇಲೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುತ್ತೇನೆ. ಅವರಿಗೆ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು