ಕಲಬುರ್ಗಿ: ಜಿಲ್ಲೆಯಲ್ಲಿ ಕಾಮಗಾರಿಯೊಂದರ ಬಿಲ್ ಪಾಸ್ ಮಾಡೋದಕ್ಕೆ ಶೇ.5ರಷ್ಟು ಲಂಚ ನೀಡುವಂತೆ ಬಹಿರಂಗವಾಗಿಯೇ ಕೇಳಿದಂತ ಇಬ್ಬರನ್ನು ಅಮಾನತುಗೊಳಿಸಿ ಕಲಬುರ್ಗಿ ಜಿಲ್ಲಾ ಪಂಚಾಯ್ತಿ ಸಿಇಒ ಭಂವರ್ ಸಿಂಗ್ ಮೀನಾ ಆದೇಶಿಸಿದ್ದಾರೆ.
ಈ ಸಂಬಂಧ ಕಲಬುರ್ಗಿಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಿಧಿಕಾರಿ ಭಂವರ್ ಸಿಂಗ್ ಮೀನಾ ಆದೇಶಿಸಿದ್ದು, ಕಾಮಗಾರಿಯ ಬಿಲ್ ಗೆ 5 ಪರ್ಸೆಂಟ್ ಲಂಚ ಕೇಳಿದಂತ ಆರೋಪದಡಿ ಜೆಇ ಶ್ರೀಪಾದ್ ಕುಲಕರ್ಣಿ, ಪಿಡಿಒ ಮಂಜುಶ್ರೀ ಅವರನ್ನು ಅಮಾನತುಗೊಳಿಸಿದ್ದಾರೆ.
ಅಂದಹಾಗೇ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಲಂಚ ಕೇಳಿದಂತ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಸೂಚಿಸಿದ್ದರು. ಈ ಸೂಚನೆಯ ಬೆನ್ನಲ್ಲೇ ಸಿಇಒ ಅವರು ಜೆಇ ಶ್ರೀಪಾದ್ ಕುಲಕರ್ಣಿ ಹಾಗೂ ಪಿಡಿಒ ಮಂಜುಶ್ರೀ ಅವರ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರಿಸಿ, ಸಸ್ಪೆಂಡ್ ಮಾಡಲಾಗಿದೆ.
BIG NEWS: ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ: ಮೂವರು ಆರೋಪಿಗಳು ಅರೆಸ್ಟ್
BREAKING: ರಾಜ್ಯದಲ್ಲಿ ಬಂಧಿತ ಮೂವರು ಶಂಕಿತ ಉಗ್ರರಿಗೆ 6 ದಿನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ