ಬೆಂಗಳೂರು: ನಗರದಲ್ಲಿ ಮಹಾಮಳೆಯಾಗುತ್ತಿದೆ. ಈ ಮಳೆಯಿಂದಾಗಿ ಗೋಡೆಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಮೋಟಾರ್ ನಿಂದ ಮಳೆ ನೀರು ತೆರವು ಮಾಡಲು ಹೋಗಿ ಕರೆಂಟ್ ಶಾಕ್ ನಿಂದ 12ರ ಬಾಲಕ ಸೇರಿದಂತೆ ಇಬ್ಬರು ಬಲಿಯಾಗಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಮಹಾಮಳೆಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಇಂದು ಮಹಾಮಳೆಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಅಪಾರ್ಟ್ ಮೆಂಟ್ ನ ಬೇಸ್ಮೆಂಟ್ ನಲ್ಲಿ ಮೋಟಾರ್ ನಿಂದ ಮಳೆಯ ನೀರು ಹೊರ ಹಾಕಲು ಹೋಗಿ ಕರೆಂಟ್ ಶಾಕ್ ನಿಂದ 12 ವರ್ಷದ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ಮನಮೋಹನ್ ಕಾಮತ್(63) ಹಾಗೂ ದಿನೇಶ್ (12) ಎಂಬುದಾಗಿ ಗುರುತಿಸಲಾಗಿದೆ. ಇವರು ಬಿಟಿಎಂ ಲೇಔಟ್ ನ 2ನೇ ಹಂತದಲ್ಲಿರುವಂತ ಎನ್ ಎಸ್ ಪಾಳ್ಯದಲ್ಲಿನ ಮಧುವನ ಅಪಾರ್ಮೆಂಟ್ ನ ನಿವಾಸಿಗಳು.
ಇಂದು ಸಂಜೆ 6.15ರ ಸುಮಾರಿಗೆ ಅಪಾರ್ಮೆಂಟ್ ನಲ್ಲ ಬೇಸ್ಮೆಟ್ ನಲ್ಲಿ ತುಂಬಿದ್ದಂತ ನೀರನ್ನು ಮೋಟರ್ ಮೂಲಕ ಹೊರ ಹಾಕಲು ಪ್ರಯತ್ನಿಸಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಕರೆಂಟ್ ತಗುಲಿ ಮೋಹನ್ ಕಾಮತ್ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ನೀರು ಹೊರಹಾಕುತ್ತಿದ್ದಂತ ನೇಪಾಳ ಮೂಲಕ ಬಾಲಕ ಭರತ್ ಎಂಬುವರ ಪುತ್ರ ದಿನೇಶ್ ಕೂಡ ಸಾವನ್ನಪ್ಪಿದ್ದಾರೆ.