ಚಿಕ್ಕಬಳ್ಳಾಪುರ: ಎರಡು ಲಾರಿಗಳ ನಡುವೆ ಡಿಕ್ಕಿಯ ನಂತ್ರ ಉಂಟಾದಂತ ಬೆಂಕಿಯಿಂದಾಗಿ ಲಾರಿಗಳು ಸುಟ್ಟು ಕರಕಲಾಗಿರುವಂತ ಘಟನೆ ಚಿಕ್ಕಬಳ್ಳಾಪುರದ ಬಳಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಹುನೇಗಲ್ ಗ್ರಾಮದ ಬಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಿಎನ್ ಜಿ ಸಿಲಿಂಡರ್ ತುಂಬಿದ್ದಂತ ಲಾರಿಯೊಂದು ತಿರುವು ಪಡೆದುಕೊಳ್ಳುತ್ತಿದ್ದಾಗ ಹಿಂಬದಿಯಿಂದ ಕಲ್ಲು ತುಂಬಿದ್ದಂತ ಲಾರಿಯೊಂದು ಡಿಕ್ಕಿಹೊಡೆದು ಭೀಕರ ಅಪಘಾತ ಸಂಭವಿಸಿದೆ.
ಈ ಅಪಘಾತದ ನಂತ್ರ ಸಿಎನ್ ಜಿ ಸಿಲಿಂಡರ್ ತುಂಬಿದ್ದಂತ ಲಾರಿಗೆ ಬೆಂಕಿ ತಗುಲಿದೆ. ಈ ಬೆಂಕಿಯಿಂದಾಗಿ ಲಾರಿ ಸುಟ್ಟು ಕರಕಲಾಗಿದೆ. ಲಾರಿ ಚಾಲಕ ಬೆಂಕಿಯಲ್ಲಿ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದಾನೆ.
ಲಾರಿಗೆ ಬೆಂಕಿ ತಲುಗಿದ ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ನಂದಿಸಿದ್ದಾರೆ. ಗಾಯಾಳು ಲಾರಿ ಚಾಲಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹುಬ್ಬಳ್ಳಿ ಸಿಲಿಂಡರ್ ಸ್ಪೋಟ ದುರಂತ ಪ್ರಕರಣ: ಚಿಕಿತ್ಸೆ ಫಲಿಸದೇ ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು
Good News: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್; ಜನವರಿಯಲ್ಲಿ ಶೇ.3ರಷ್ಟು ‘DA’ ಹೆಚ್ಚಳ | DA Hike