ಕೋಲಾರ: ಜಿಲ್ಲೆಯಲ್ಲಿ ಹಣಕಾಸಿನ ವಿಚಾರಕ್ಕಾಗಿ ಉಂಟಾದಂತ ಗಲಾಟೆಯ ವೇಳೆಯಲ್ಲಿ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಲಾರದ ಬೋವಿನಗರದ ಸುನೀಲ್ ಕುಮಾರ್ ಎಂಬುವರಿಗೆ ಹಣಕಾಸಿನ ವಿಚಾರವಾಗಿ ಚಾಕುವಿನಿಂದ ಇರಿಯಲಾಗಿದೆ. ಚಾಕು ಇರಿಯಲು ಬಂದಿದ್ದಂತ ರಾಹುಲ್, ಕೃಷ್ಣೋಜಿರಾವ್ ಗೂ ಗಾಯವಾಗಿದೆ.
ಗಾಯಗೊಂಡ ಸುನೀಲ್ ಕುಮಾರ್, ಕೃಷ್ಣೋಜಿ ರಾವ್ ಅವರನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಲಾಟೆಯ ನಂತ್ರ ಸ್ಥಳದಿಂದ ರಾಹುಲ್ ಹಾಗೂ ಸುಮನ್ ಎಂಬುವರು ಪರಾರಿಯಾಗಿದ್ದಾರೆ. ಈ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG NEWS: ರಾಜ್ಯಾಧ್ಯಂತ ಹೊಸದಾಗಿ ಸಾವಿರಾರೂ ‘ಬಾರ್ ಲೈಸೆನ್ಸ್’ ನೀಡಲು ಮುಂದಾದ ಸರ್ಕಾರ
BIG NEWS : ದೇಶಾದ್ಯಂತ `ತಾಪಮಾನ’ ಹೆಚ್ಚಳ : ಹೃದಯ, ಶ್ವಾಸಕೋಶ, ಮೆದುಳಿಗೆ ಹಾನಿಕಾರಕ.!