ಬೆಳಗಾವಿ: ಜಿಲ್ಲೆಯ ಖಾನಾಪುರದಲ್ಲಿ ಆರೂವರೆ ಎಕರೆ ಜಮೀನಿಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಬೆಳಗಾವಿಯ ಖಾನಾಪುರದಲ್ಲಿ ಸೆರಾಮಿಕ್ಸ್ ಫ್ಯಾಕ್ಟರಿ ಸಿಬ್ಬಂದಿ ಹಾಗೂ ಸ್ಥಳೀಯರ ಮಧ್ಯೆ ಮಾರಾಮಾರಿಯೇ ನಡೆದಿದೆ. ಖಾನಾಪುರದ ವಿದ್ಯಾನಗರದಲ್ಲಿ ನೂರಾರು ಜನರು ಆರೂವರೆ ಎಕರೆ ಜಾಗಕ್ಕೆ ಜಗಳ ಆಡಿದ್ದಾರೆ.
ಜಾಗ ನಮ್ಮದೆಂದು ಸ್ಥಳೀಯರು ಹಾಗೂ ಸೆರಾಮಿಕ್ಸ್ ಸಿಬ್ಬಂದಿಯ ನಡುವೆ ಉಂಟಾಗದಂತ ಜಗಳ, ತಾರಕಕ್ಕೇರಿದಾಗ ಮಾರಾಮಾರಿಯೇ ನಡೆದಿದೆ. ಶಾಹುನಗರದ ನಿವಾಸಿಗಳು ಹಾಗೂ ಸೆರಾಮಿಕ್ಸ್ ಸಿಬ್ಬಂದಿಗಳ ನಡುವೆ ಉಂಟಾಗಂತ ಜಗಳದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯ ನಿವಾಸಿಗಳು ಸೆರಾಮಿಕ್ಸ್ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಸ್ಥಳದಲ್ಲೇ ಖಾನಾಪುರ ಠಾಣೆಯ ಪೊಲೀಸರು ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಣದಲ್ಲಿ ತೊಡಗಿದ್ದಾರೆ.
BREAKING: ದೇಶದಲ್ಲಿ ಮತ್ತೊಂದು ರೈಲು ಅಪಘಾತ: ಓರ್ವ ಪ್ರಯಾಣಿಕ ಸಾವು, ಹಲವರಿಗೆ ಗಾಯ
BREAKING: 10 & 12 ನೇ ತರಗತಿಯ ಹೊಸ ಪಠ್ಯಕ್ರಮವನ್ನು ಬಿಡುಗಡೆ ಮಾಡಿದ CBSE | New Syllabus For 10th, 12th