ಬೆಂಗಳೂರು: ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಪೋಟಗೊಳಿಸಿದಂತ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದರು. ಡ್ರೋನ್ ಪ್ರತಾಪ್ ಗೆ ಸಹಾಯ ಮಾಡಿದಂತ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಈಗ ಬಂಧಿಸಿದ್ದಾರೆ.
ಕೃಷಿ ಹೊಂಡ ಒಂದರದಲ್ಲಿ ಸೋಡಿಯಂ ಬಳಸಿ ಡ್ರೋನ್ ಪ್ರತಾಪ್ ಸ್ಪೋಟಗೊಳಿಸಿದ್ದನು. ಈ ಸಂಬಂಧ ಕೇಸ್ ದಾಖಲಾಗಿತ್ತು. ಆನಂತ್ರ ಆತನನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದರು.
ಇದೀಗ ಈ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ವೀಡಿಯೋ ಮಾಡಿದ್ದಂತ ಕ್ಯಾಮೆರಾಮ್ಯಾನ್ ವಿನಯ್ ಹಾಗೂ ಆತನಿಗೆ ಸ್ಟೂಡಿಯೋ ಕೊಡಿಸಿದ್ದಂತ ಗೆಳೆಯ ಪ್ರಜ್ವಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇದಲ್ಲದೇ ಡ್ರೋನ್ ಪ್ರತಾಪ್ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದರು. ಅವೆನ್ಯೂ ರಸ್ತೆಯಲ್ಲಿ ಸೋಡಿಯಂ ಖರೀದಿಸಿದಂತ ಮಾಹಿತಿ ಪಡೆದು ಅಂಗಡಿಗೂ ಕರೆದೊಯ್ದು ಸ್ಥಳ ಮಹಜರು ಮಾಡಿದರು. ಅಲ್ಲದೇ ಡ್ರೋನ್ ಪ್ರತಾಪ್ ಮನೆ, ಕಚೇರಿಗೂ ಕರೆದೊಯ್ದು ಸ್ಥಳ ಮಹಜರು ಮಾಡಿದರು.