ತುಮಕೂರು: ಎಟಿಎಂ ಮೆಷಿನ್ನಿಗೆ ಸ್ಕಿಮ್ಮಿಂಗ್ ಮಿಷಿನ್ ಹಾಗೂ ಕ್ಯಾಮರಾ ಅಳವಡಿಸಿ ಸಾರ್ವನಿಕರ ಡೆಟಾ ಕದ್ದು, ಹಣ ವಂಚಿಸಿದ್ದಂತ ಇಬ್ಬರು ವಿದೇಶಿ ಪ್ರಜೆಗಳಿಗೆ 8 ವರ್ಷ ಜೈಲು ಹಾಗೂ ತಲಾ ಐದು ಲಕ್ಷ ದಂಡವನ್ನು ವಿಧಿಸಿ ತುಮಕೂರು ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ತುಮಕೂರಿನಲ್ಲಿ 2022ರ ಅಕ್ಟೋಬರ್ 31ರಂದು ಎಟಿಎಂಗಳಿಗೆ ಸ್ಕಿಮ್ಮಿಂಗ್ ಮಿಷನ್ ಹಾಗೂ ಕ್ಯಾಮಾರಾ ಅಳಡವಿಡಿಸಿದ್ದಂತ ಕೀನ್ಯಾದ ವಾನ್ ಕಂಬೋಡಜಿ ಹಾಗೂ ನೈಜೀರಿಯಾದ ಲಾರೆನ್ಸ್ ಮೊಕೆಮೋ ಅವರು ಎಟಿಎಂ ಕಾರ್ಡ್ ದಾರರ ಡೆಟಾ ಕದ್ದು ನಕಲಿ ಕಾರ್ಡ್ ಬಳಸಿ ಹಣ ಡ್ರಾ ಮಾಡಿದ್ದರು. ಈ ಸಂಬಂಧ ತುಮಕೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಶೇಷಾದ್ರಿ ಅವರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಈ ಪ್ರಕರಣ ಸಂಬಂಧ ಸರ್ಕಾರಿ ಅಭಿಯೋಜಕರಾದಂತ ವಿಎ ಕವಿತಾ ಅವರು ವಾದ ಮಂಡಿಸಿದ್ದರು. ಸುಧೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದೆ. ಕೀನ್ಯಾದ ವಾನ್ ಕಂಬೋಡಜಿ, ನೈಜೀರಿಯಾದ ಲಾರೆನ್ಸ್ ಮೊಕೆಮೋಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ತಲಾ 5 ಲಕ್ಷ ದಂಡವನ್ನು ವಿಧಿಸಿ ತೀರ್ಪು ನೀಡಿದೆ ಎಂಬುದಾಗಿ ಸರ್ಕಾರಿ ಅಭಿಯೋಜಕಿ ವಿ.ಎ ಕವಿತಾ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ: ಮೂಡುಗೊಪ್ಪ ನೀಲಕಂಠೇಶ್ವರ ಸೊಸೈಟಿ ಚುನಾವಣೆಯಲ್ಲಿ ಸುಬ್ರಹ್ಮಣ್ಯ ಅಂಡ್ ಕರುಣಾಕರ ಶೆಟ್ಟಿ ಟೀಂ ಗೆಲುವು
SHOCKING : ಚಳಿಗೆ ಹೊಗೆ ಹಾಕಿ ಮಲಗಿದಾಗಲೇ ದುರಂತ : ಉಸಿರುಗಟ್ಟಿ ದಂಪತಿ ಸಾವು.!
BIGG NEWS : 2025 ನೇ ಸಾಲಿನ ರಾಜ್ಯ `ಸಾರ್ವತ್ರಿಕ ರಜೆ’ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ | Holiday List 2025