ಬೆಂಗಳೂರು: ನಿನ್ನೆ ಶಾಲೆಗೆಂದು ತೆರಳಿದ್ದಂತ ಎಸ್ ಎಸ್ ಎಲ್ ಸಿ ಓದುತ್ತಿದ್ದಂತ ಇಬ್ಬರು ವಿದ್ಯಾರ್ಥಿನಿಯರು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವುದಾಗಿ ಪೊಲೀಸರು ಕೋಲಾರ ಠಾಣೆಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಇಂದು ಬೆಂಗಳೂರಲ್ಲಿ ಸುರಕ್ಷಿತವಾಗಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಕೋಲಾರ ಜಿಲ್ಲೆಯ ನರಸಾಪುರ ಗ್ರಾಮದ ಶರಣ್ಯ ಹಾಗೂ ದೇವಿ ಎಂಬ ವಿದ್ಯಾರ್ಥಿನಿಯರೇ ನಾಪತ್ತೆಯಾಗಿದ್ದರು. ಈ ಇಬ್ಬರು ವಿದ್ಯಾರ್ಥಿನಿಯರು ನಿನ್ನೆಯ ಶುಕ್ರವಾರದಂದು ಬೆಳಗ್ಗೆ ಶಾಲೆಗೆಂದು ತೆರಳಿದ್ದರು. ಆದರೇ ಇದುವರೆಗೆ ಮನೆಗೆ ವಾಪಾಸ್ಸಾಗಿಲ್ಲ. ಹೀಗಾಗಿ ಇಡೀ ದಿನ ಅವರನ್ನು ಪೋಷಕರು ಹುಡುಕಾಡಿದ್ದಾರೆ. ಆದರೇ ದೊರೆತಿಲ್ಲ. ಹೀಗಾಗಿ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು.
ರಾತ್ರಿಯಾದರೂ ಇಬ್ಬರು ಮಕ್ಕಳು ವಾಪಾಸ್ ಆಗದ ಕಾರಣ ಕೋಲಾರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರ. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಂತ ಪೊಲೀಸರು, ಬಾಲಕಿಯರ ಪತ್ತೆಗೆ ತನಿಖೆ ಕೈಗೊಂಡಿದ್ದರು. ಈ ಬೆನ್ನಲ್ಲೇ ಬೆಂಗಳೂರಲ್ಲಿ ಇಂದು ನಾಪತ್ತೆಯಾಗಿದ್ದಂತ ಶರಣ್ಯ ಹಾಗೂ ದೇವಿ ಎಂಬ ಬಾಲಕಿಯರು ಪತ್ತೆಯಾಗಿದ್ದಾರೆ. ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಂತೆ ಆಗಿದೆ.
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ರಾಜ್ಯದ ‘ಗ್ರಾಮ ಪಂಚಾಯ್ತಿ’ಗಳಲ್ಲಿ ಈ ಎಲ್ಲಾ ‘ಸೇವೆ’ಗಳು ಲಭ್ಯ
ವಾಟ್ಸಾಪ್ ಹೊಸ ವೈಶಿಷ್ಟ್ಯ ; ರಿಪ್ಲೈ ಮಾಡದ ಬಳಕೆದಾರರಿಗೆ ಸಂದೇಶ ಕಳುಹಿಸುವ ಮಿತಿ ಪರಿಚಯ








