ಬೆಂಗಳೂರು: ನಗರದಲ್ಲಿ ಶಾಲಾ ಬಸ್ ಹರಿದು ಪೊಲೀಸ್ ಸಿಬ್ಬಂದಿಯ ಇಬ್ಬರು ಮಕ್ಕಳು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ಹೆಣ್ಣೂರು ಸಂಚಾರಿ ಠಾಣಾ ವ್ಯಾಪ್ತಿಯ ಥಣಿಸಂದ್ರ ಬಳಿ ಘಟನೆ ನಡೆದಿದೆ. ಪೊಲೀಸ್ ಪೇದೆಯ ಇಬ್ಬರು ಪುತ್ರರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಮನಕಲಕುವ ಘಟನೆ ನಡೆದಿದೆ.
ಮೃತ ಮಕ್ಕಳನ್ನ ವರ್ಷ (2) ಹಾಗು ಭಾನು (4) ಎಂದು ತಿಳಿದುಬಂದಿದೆ. ಬೈಕ್ನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ಶಾಲಾ ಬಸ್ ತೆಗೆದುಕೊಳ್ಳುವಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಮೇಲೆ ಇದ್ದ ಇಬ್ಬರೂ ಮಕ್ಕಳು ಕೆಳಗೆ ಬಿದ್ದಾಗ ಇಬ್ಬರು ಮಕ್ಕಳ ಮೇಲೆ ಶಾಲಾ ಬಸ್ ಹರಿದು ದುರಂತ ಸಂಭವಿಸಿದೆ.








