ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ಮುರಿದು ಬಿದ್ದ ಪರಿಣಾಮ, 2 ಕಾರು, ಆಟೋವೊಂದು ಜಖಂಗೊಂಡಿರುವಂತ ಘಟನೆ ಕಮೀಷನರ್ ಕಚೇರಿಯ ಹಿಂಭಾಗದಲ್ಲೇ ನಡೆದಿದೆ.
ಬೆಂಗಳೂರಿನ ನಗರ ಪೊಲೀಸ್ ಕಚೇರಿಯ ಹಿಂಭಾಗದಲ್ಲಿನ ಆಲಿ ಆಸ್ಕರ್ ರಸ್ತೆಯಲ್ಲಿ ರಸ್ತೆ ಬದಿಯಲ್ಲೇ ವಾಹನಗಳನ್ನು ಪಾರ್ಕ್ ಮಾಡಿ ಹೋಗಿದ್ದಂತ ವೇಳೆಯಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ಮುರಿದು ಬಿದ್ದಿದೆ. ಅದರ ಅಡಿಯಲ್ಲಿ ನಿಲ್ಲಿಸಿದ್ದ 2 ಕಾರುಗಳು ಜಖಂಗೊಂಡಿದ್ದಾವೆ.
ಇನ್ನೂ ಅದೇ ರಸ್ತೆಯಲ್ಲಿ ಸಾಗುತ್ತಿದ್ದಂತ ಆಟೋ ಒಂದರ ಮೇಲೆಯೂ ಮರ ಮುರಿದು ಬಿದ್ದು, ಚಾಲಕ ಗಾಯಗೊಂಡಿರೋದಾಗಿ ಹೇಳಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದಂತ ಬಿಬಿಎಂಪಿಯ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ವಾಹನಗಳನ್ನು ಹೊರತೆಗೆದಿದ್ದಾರೆ.
BIG UPDATE: ವಯನಾಡು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 254ಕ್ಕೆ ಏರಿಕೆ: 192 ಮಂದಿ ನಾಪತ್ತೆ, 1592 ಜನರ ರಕ್ಷಣೆ
ಅ.2ರಿಂದ ‘SSLC ಪರೀಕ್ಷೆ-3’ ಆರಂಭ: ‘97,933 ವಿದ್ಯಾರ್ಥಿ’ಗಳು ನೋಂದಣಿ | SSLC Exam-3