ದಾವಣಗೆರೆ: ಜಿಲ್ಲೆಯಲ್ಲಿ ರಜೆ ಇದ್ದ ಕಾರಣ ಕೆರೆಗೆ ಈಜಲು ತೆರಳಿದ್ದಂತ ಇಬ್ಬರು ಬಾಲಕರು ನೀರುಪಾಲಾಗಿರುವಂತ ಧಾರುಣ ಘಟನೆ ಕುರ್ಕಿ ಗ್ರಾಮದ ಬಳಿಯಲ್ಲಿ ನಡೆದಿದೆ.
ದಾವಣಗೆರೆಯ ಗುರುಕುಲ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇಂದು ಭಾನುವಾರದ ಕಾರಣ ಈಜಾಡಲು ಕುರ್ಕಿ ಗ್ರಾಮದ ಕೆರೆಯ ಬಳಿಗೆ ತೆರಳಿದ್ದರು. ನೀರಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಯತೀಂದ್ರ(16) ಮತ್ತು ಪಾಂಡು(16) ಎಂಬುದಾಗಿ ಗುರುತಿಸಲಾಗಿದೆ.
ಮೃತ ವಿದ್ಯಾರ್ಥಿಗಳು ತುರ್ಚಘಟ್ಟದ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಆಗಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ಈಜಾಡಲು ತೆರಳಿದ್ದರು. ಮೃತ ವಿದ್ಯಾರ್ಥಿಗಳಲ್ಲಿ ಒಬ್ಬರ ಶವ ದೊರೆತಿದೆ. ಇನ್ನೊಬ್ಬನ ಶವಕ್ಕಾಗಿ ಶೋಧಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ಮುಂದುವರೆಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG NEWS: ಸಿದ್ಧರಾಮಯ್ಯ ಜೈಲಿಗೆ ಹೋದ್ರೆ ನಾನು ಸೇರಿ 1 ಕೋಟಿ ಜನರು ಹೋಗ್ತೀವಿ: ವಾಟಾಳ್ ನಾಗರಾಜ್ ಗುಡುಗು
SHOCKING : ಈ `ಎಣ್ಣೆ’ ಸೇವನೆಯಿಂದ ಮಧುಮೇಹ, ಕ್ಯಾನ್ಸರ್, ಹೃದಯಾಘಾತದ ಅಪಾಯ ಹೆಚ್ಚಳ.!