ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದು ಆಟೋದಲ್ಲಿ ಶವ ಇರಿಸಿದ್ದಂತ ಘಟನೆ ನಿನ್ನೆ ನಡೆದಿತ್ತು. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ದು, ನಿನ್ನೆ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಹತ್ಯೆಗೈದು ಶವವನ್ನು ಆಟೋದಲ್ಲಿ ಎಸೆದು ಹೋಗಿದ್ದಂತ ಘಟನೆ ಬೆಳಕಿಗೆ ಬಂದಿತ್ತು. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದಾಗ ಕೊಲೆ ಮಾಡಿದ್ದು ಗೊತ್ತಾಗಿತ್ತು ಎಂದರು.
ಈ ಪ್ರಕರಣ ಸಂಬಂಧ ಕೇಸ್ ದಾಖಲಾದ ಬಳಿಕ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೈದು ಬೇರೆ ಜಿಲ್ಲೆಗೆ ಆರೋಪಿಗಳು ಹೋಗಿ ತಲೆ ಮರೆಸಿಕೊಂಡಿದ್ದರು. ಆರೋಪಿಗಳಲ್ಲಿ ಓರ್ವ ಕಾರ್ಪೆಂಟರ್, ಮತ್ತೋರ್ವ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ಮಾಹಿತಿ ನೀಡಿದ್ದಾರೆ.
ಕೊಲೆಯಾದ ಮಹಿಳೆ ಬೇರೆಯೊಬ್ಬನ ಜೊತೆ ಪೋನ್ ನಲ್ಲಿ ಮಾತನಾಡುತ್ತಿದ್ದಳು. ಬೇರೆಯವರ ಜೊತೆಗೆ ಅಕ್ರಮ ಸಂಬಂಧ ಇರಬಹುದೆಂದು ಶಂಕಿಸಿ ಹತ್ಯೆ ಮಾಡಲಾಗಿದೆ. ತನಿಖೆಯಿಂದ ಮಹಿಳೆಯ ಕೊಲೆಗೆ ಕಾರಣ ತಿಳಿದು ಬಂದಿದೆ. ಸದ್ಯ ಇಬ್ಬರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದರು.
BIG NEWS : ಅಕ್ರಮವಾಗಿ `BPL’ ರೇಷನ್ ಕಾರ್ಡ್ ಪಡೆದವರಿಗೆ ಸರ್ಕಾರದಿಂದ ಬಿಗ್ ಶಾಕ್.!








