ಕಾರವಾರ: ಸಾಮಾಜಿಕ, ವೈದ್ಯಕೀಯ ರಂಗದಲ್ಲಿ ಹೆಸರು ಮಾಡಿದ್ದಂತ ಕುಟುಂಬಕ್ಕೆ ಸೇರಿದ್ದಂತ ರಾಜೀವ್ ಪಿಕಳೆ ಅವರನ್ನು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತನ್ನನ್ನು ತೇಜೋವಧೆ ಮಾಡಿದ ಕಾರಣಕ್ಕಾಗಿ ರಾಜೀವ್ ಪಿಕಳೆ ಎನ್ನುವಂತ ವೈದ್ಯರೊಬ್ಬರು ತಮ್ಮ ಡಬ್ಬಲ್ ಬ್ಯಾರಲ್ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡಿದಂತ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಸುಭಾಷ್, ಹರಿಶ್ಚಂದ್ರ ಎಂಬುದಾಗಿ ತಿಳಿದು ಬಂದಿದೆ. ಅಂಕೋಲಾ ಠಾಣೆಯ ಪೊಲೀಸರು ವೀಡಿಯೋ ವೈರಲ್ ಮಾಡಿ, ರಾಜೀವ್ ಪಿಕಳೆ ಸಾವಿಗೆ ಕಾರಣವಾದ ಹಿನ್ನಲೆಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
CRIME NEWS: ಹಣಕಾಸಿನ ವಿಚಾರಕ್ಕೆ ‘ಅಣ್ಣ-ತಮ್ಮ’ನನ್ನೇ ಕೊಂದ ಸ್ನೇಹಿತ; ಹೊನ್ನಾವರ ಪೊಲೀಸರಿಂದ ಮೂವರು ಅರೆಸ್ಟ್








