ಬೆಳಗಾವಿ: ನಿನ್ನೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಯ ವೇಳೆಯಲ್ಲಿ ಚಾಕುವಿನಿಂದ ಇರಿದು ಐವರಿಗೆ ಗಾಯಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಮಾರ್ಕೆಟ್ ಪೊಲೀಸರು ಇಬ್ಬರು ಆರೋಪಿಗಳನ್ನು ಕನ್ನಡ ರಾಜ್ಯೋತ್ಸವ ಮೆರವಣಿಗೆಯ ವೇಳೆಯಲ್ಲಿ ಚಾಕುವಿನಿಂದ ಇರಿದಿದ್ದಂತವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅರುಣ್ ಕುರುಬರ, ಕಿರಿಣ್ ಕುರುಬರ ಎಂಬುದಾಗಿ ತಿಳಿದು ಬಂದಿದೆ.
ನಿನ್ನೆ ರಾತ್ರಿ ಆದಿತ್ಯ ಬೇಂಡಿಗೇರಿಗೆ ಚಾಕುವಿನಿಂದ ದುರುಳರು ಇರಿದಿದ್ದರು. ಬೆಳಗಾವಿ ಡಿಸಿ ಕಚೇರಿ ಎದುರೇ ಈ ಘಟನೆ ನಡೆದಿತ್ತು. ಗಾಯಾಳು ಆದಿತ್ಯ ಬೆಳಗಾವಿ ತಾಲ್ಲೂಕಿನ ಕೆ.ಕೆ ಕೊಪ್ಪದ ನಿವಾಸಿಯಾಗಿದ್ದನು.
‘ಸಾಹಿತಿ ಡಾ.ಬಿಎಲ್ ವೇಣು’ಗೆ ‘ಕೆಂಧೂಳಿ ರಾಜ್ಯೋತ್ಸವ’ ಪ್ರಶಸ್ತಿ: ಸಂಪಾದಕ ತುರುವನೂರು ಮಂಜುನಾಥ್
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








