ರಾಯಚೂರು: ಜಿಲ್ಲೆಯಲ್ಲಿ ಪತಿಯನ್ನು ಪತ್ನಿಯೊಬ್ಬರು ಸೆಲ್ಫಿ ತೆಗೆಯೋ ಸಂದರ್ಭದಲ್ಲಿ ನದಿಗೆ ತಳ್ಳಿದಂತ ಘಟನೆ ನಡೆದಿತ್ತು. ಈ ಬ್ರಡ್ಜ್ ಮೇಲಿನಿಂದ ಪತಿಯನ್ನ ನದಿಗೆ ತಳ್ಳಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು ಈ ಪ್ರಕರಣದಲ್ಲಿ ಪತಿ ತಾತಪ್ಪ ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾತಪ್ಪ ಬಾಲ್ಯವಿವಾಹವಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಕೇಸ್ ದಾಖಲಾಗಿದೆ.
ಅಂದಹಾಗೇ ತಾತಪ್ಪ 15 ವರ್ಷ 8 ತಿಂಗಳ ಅಪ್ರಾಪ್ತೆಯನ್ನು ವಿವಾಹವಾಗಿದ್ದರು. ಹೀಗಾಗಿ ತಾತಪ್ಪ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ತಾತಪ್ಪ, ಆತನ ತಾಯಿ, ಅಪ್ರಾಪ್ತೆ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ದೇವಸುಗೂರು ಪಿಡಿಒ ರವಿಕುಮಾರ್ ನೀಡಿದ್ದಂತ ದೂರಿನ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಇನ್ನೂ ಬಾಲಕಿ ರಕ್ಷಣೆ ಮಾಡಿರುವಂತ ಯಾದಗಿರಿ ಮಹಿಳಾ ರಕ್ಷಣಾ ಘಟಕದವರು ಯಾದಗಿರಿ ಜಿಲ್ಲಾ ಬಾಲಕಿಯರ ಬಾಲಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ.
ಸಾಗರ ನಗರದಲ್ಲಿ ‘ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ’ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ
ನಾಳೆ ನಟ ದರ್ಶನ್ ಅಂಡ್ ಗ್ಯಾಂಗ್ ಪಾಲಿಗೆ ಬಿಗ್ ಡೇ: ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ತೀರ್ಪಿನತ್ತ