ಬೆಂಗಳೂರು: ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿಗೆ. ಗಾನವಿ ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದ ಬಗ್ಗೆ ತಿಳಿದು ಬಂದಿದೆ. ಈ ಹಿನ್ನಲೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಹೇಳಲಾಗುತ್ತಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಕುಟುಂಬಸ್ಥರ ವಿರುದ್ಧ, ಸೂರಜ್ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ನವ ವಿವಾಹಿತೆ ಗಾನವಿ ಆತ್ಮಹತ್ಯೆ ಬೆನ್ನಲ್ಲೇ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಇದೇ ಸಂದರ್ಭದಲ್ಲಿ ಸೂರಜ್ ಮೇಲೆ ಗಾನವಿ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದರು. ಅಲ್ಲದೇ ಸೂರಜ್ ಕುಟುಂಬದ ವಿರುದ್ಧ ದೂರು ನೀಡಿದ್ದರಿಂದ ಸೂರಜ್ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ಘಟನೆಯ ನಡುವೆ ಗಾನವಿ-ಸೂರಜ್ ಮದುವೆಯ ಬಳಿಕ ಹನಿಮೂನ್ ಗೆ ಶ್ರೀಲಂಕಾಗೆ ತೆರಳಿದ್ದರು. ಆ ವೇಳೆಯಲ್ಲೇ ಗಾನವಿ ತಾನು ಹರ್ಷ ಎಂಬಾತನನ್ನು ಪ್ರೀತಿಸುತ್ತಿದ್ದೇನೆ.ಆತನನ್ನೇ ಮದುವೆಯಾಗೋದಕ್ಕೂ ನಿರ್ಧರಿಸಿದ್ದೆ. ಆದರೇ ಮನೆಯವರ ಒತ್ತಾಯಕ್ಕೆ ಮಣಿದು ನಿಮ್ಮನ್ನು ಮದುವೆಯಾಗಬೇಕಾಯಿತು ಎಂದು ತಿಳಿಸಿದ್ದಳು.
ಈ ಎಲ್ಲಾ ವಿಷಯವನ್ನು ಕೇಳಿದಂತ ಸೂರಜ್ ತನ್ನ ಹನಿಮೂನ್ ಟ್ರಿಪ್ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದರು. ಆ ಬಳಿಕ ಗಾನವಿ ಕುಟುಂಬಸ್ಥರು ಆಕೆಯನ್ನು ಮನೆಗೆ ಕರೆದೊಯ್ದಿದ್ದರು. ಆ ಬಳಿಕ ಡಿ.24ರಂದು ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಗಾನವಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಆಕೆಯ ತಾಯಿ ರುಕ್ಮಿಣಿ ಸೂರಜ್ ಹಾಗೂ ಆಕೆಯ ತಾಯಿ ಮೇಲೆ ಕಿರುಕುಳ ಆರೋಪ, ವರದಕ್ಷಿಣೆ ಆರೋಪ ಮಾಡಿ ವಿದ್ಯಾರಣ್ಯಪುರಂ ಠಾಣೆಯಲ್ಲಿ ವರದಕ್ಷಿಣೆ ಕೇಸ್ ದಾಖಲಿಸಿದ್ದರು.
ಗಾನವಿ ಆತ್ಮಹತ್ಯೆ ಬಳಿಕ ಮಹಾರಾಷ್ಟ್ರಕ್ಕೆ ಸೂರಜ್ ಮತ್ತು ಆಕೆಯ ತಾಯಿ ಜಯಂತಿ ತೆರಳಿದ್ದರು. ಅಲ್ಲಿನ ಲಾಡ್ಜ್ ಒಂದರಲ್ಲಿ ಹೆದರಿ ಗಾನವಿ ಪತಿ ಸೂರಜ್ ಆತ್ಮಹತ್ಯೆಗೆ ಶರಣಾದರೇ, ಸೂರಜ್ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು.
ಸದ್ಯ ಸೂರಜ್ ಬಾವ ರಾಜ್ ಕುಮಾರ್ ಕೂಡ ಗಾನವಿ ಕುಟುಂಬದ ವಿರುದ್ಧ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆಯ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಗಾನವಿ ಆತ್ಮಹತ್ಯೆ ಕೇಸ್ ಮತ್ತೊಂದು ಟ್ವಿಸ್ಟ್ ಪಡೆದಂತೆ ಆಗಿದೆ.
ಸಾಗರದಲ್ಲಿ ‘ನಕಲಿ ಕಾರ್ಮಿಕರ ಕಾರ್ಡ್’ ಮಾಡುತ್ತಿರೋರಿಗೆ ಈ ಎಚ್ಚರಿಕೆ ಕೊಟ್ಟ ‘ಶಾಸಕ ಗೋಪಾಲಕೃಷ್ಣ ಬೇಳೂರು’








