ಬೆಂಗಳೂರು: ಬೆಂಗಳೂರು: ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ (Lakshmi Siddaiah) ಆ್ಯಕ್ಸಿಡೆಂಡ್ ಮಾಡಿ ಯುವತಿ ಮೇಲೆ ಹಲ್ಲೆ ಮಾಡಿ ಯುವತಿ ಬಳಿ ಇದ್ದ ಪೋನ್ ಅನ್ನು ಕಸಿದುಕೊಂಡು ಹೋಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನೂ ದೂರು ದಾಖಲಿಸಿಕೊಂಡಿರುವ ಪೊಲೀಸರು ಕೂಡ ತನಿಖೆಯನ್ನು ನಡೆಸದೇ ಕಾಲ ತಳ್ಳುತ್ತಿದ್ದಾರ ಅಂಥ ಯುವತಿ ಆರೋಪಿಸಿದ್ದಾರೆ.
ಮಾಧುರಿ ಎಂಬ ಯುವತಿ ತನ್ನ ಸೋದರಿ ಐಶ್ವರ್ಯ ಜತೆ ಯಮಹಾ ಫೆಸಿನೋ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಲಕ್ಷ್ಮಿ ಸಿದ್ದಯ್ಯ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಇದೇ ವೇಳೆ ಲಕ್ಷ್ಮಿ ಹಾಗೂ ಅವರ ಸಹಚರ ಆನಂದ್ ಕುಮಾರ್ ಎಂಬಾತನಿಂದ ಹಲ್ಲೆ ನಡೆದಿದ್ದಾಗಿ ಯುವತಿಯರು ಆರೋಪಿಸಿದ್ದಾರೆ.ಈ ನಡುವೆ ಲಕ್ಷ್ಮಿ ಹಾಗೂ ಅವರ ಸಹಚರ ಆನಂದ್ ಕುಮಾರ್ ಎಂಬಾತನಿಂದ ಹಲ್ಲೆ ನಡೆದಿದ್ದಾಗಿ ಯುವತಿಯರು ಯಾವುದೇ ರೀತಿಯಲ್ಲಿ ಮುಂದಾಗಿಲ್ಲ ಎನ್ನಲಾಗಿದೆ. ಕಳೆದ ಡಿಸೆಂಬರ್ 6ನೇ ತಾರೀಖು ಈ ಘಟನೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಇದಲ್ಲದೇ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರ ಕಾರ್ಯ ವೈಖರಿ ಬಗ್ಗೆ ಅನುಮಾನ ಮೂಡಿಸಿದೆ.