Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಾಮಾನ್ಯ ಕಾರ್ಯಕರ್ತರಿಗೆ ಲಕ್; ದಿಗ್ಗಜರನ್ನು ಬದಿಗೊತ್ತಿ ಹೊಸಬರಿಗೆ ಮಣೆ!

05/03/2026 11:58 AM

ಕರ್ನಾಟಕದಲ್ಲಿ `ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ’ಗೆ ಈ ವಿದ್ಯಾರ್ಹತೆ, ಮಾನದಂಡ ಕಡ್ಡಾಯ !

05/03/2026 11:55 AM

ನಿತೀಶ್ ಕುಮಾರ್ ಹಾದಿಗೆ ಸ್ವಪಕ್ಷೀಯರ ಅಡ್ಡಿ? ರಾಜ್ಯಸಭೆ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಬೆಂಬಲಿಗರಿಂದ ಭಾರಿ ಪ್ರತಿಭಟನೆ!

05/03/2026 11:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಮಳೆಯಿಂದ ತೊಂದ್ರೆ ಆಗದಂತೆ ಕ್ರಮವಹಿಸಿ: ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ
KARNATAKA

ಬೆಂಗಳೂರಲ್ಲಿ ಮಳೆಯಿಂದ ತೊಂದ್ರೆ ಆಗದಂತೆ ಕ್ರಮವಹಿಸಿ: ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ

By kannadanewsnow0907/05/2024 4:18 PM

ಬೆಂಗಳೂರು: ನಗರದಲ್ಲಿ ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳು ಮಳೆಗಾಲದ ವೇಳೆ ಎಲ್ಲಿಯೂ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಸೂಚಿಸಿದರು.

ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಮಳೆ ನೀರಿನ ಸರಾಗ ಹರಿವಿಗೆ ಸಮಸ್ಯೆ ಆಗಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಏನಾದರು ಸಮಸ್ಯೆ ಇದ್ದಲ್ಲಿ ಮೆಟ್ರೋ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ತಿಳಿಸಿದರು.

ರಾಜಕಾಲುವೆ ಹಾಗೂ ರಸ್ತೆ ಬದಿ ಚರಂಡಿಗಳಲ್ಲಿ ಹೂಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು. ನಗರದಲ್ಲಿ ಜೋರು ಮಳೆಯಾಗುವ ಸಮಯದಲ್ಲಿ ರಸ್ತೆಗಳ ಮೇಲೆ ಹೆಚ್ಚು ನೀರು ನಿಂತು ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಮೇಲೆ ಬೀಳುವ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಶೋಲ್ಡರ್ ಡ್ರೈನ್ ಗಳ ಬಳಿ ಸ್ವಚ್ಚತೆ ಕಾಪಾಡಲು ಸೂಚಿಸಿದರು.

ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು:

ಪಾಲಿಕೆ 8 ವಲಯಗಳು ಹಾಗೂ ಕೇಂದ್ರ ಕಛೇರಿ ಸೇರಿದಂತೆ 9 ಶಾಶ್ವತ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಮಳೆಗಾಲದ ವೇಳೆ ತಾತ್ಕಾಲಿಕವಾಗಿ 63 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿಕೊಂಡು, ಅಗತ್ಯವಿರುವ ಪಂಪ್‌ಸೆಟ್, ಸಲಕರಣೆಗಳು, ಗ್ಯಾಂಗ್ಸ್ ಗಳನ್ನು ಸನ್ನದ್ಧ್ದವಾಗಿಟ್ಟುಕೊಳ್ಳಬೇಕೆಂದು ಸೂಚಿಸಿದರು.

ಮರ ಕಟಾವು ತಂಡಗಳು ಸದಾ ಸನ್ನದ್ಧರಾಗಿರಬೇಕು:

ನಗರದಲ್ಲಿ ಮಳೆಗಾಲದ ವೇಳೆ ಬಿದ್ದಂತಹ ಮರಗಳು ಹಾಗೂ ರೆಂಬೆ/ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸುವ ಸಲುವಾಗಿ 28 ತಂಡಗನ್ನು ಕಾರ್ಯನಿರ್ವಹಿಸುತ್ತಿವೆ. ಅದರ ಜೊತೆಗೆ ಹೆಚ್ಚುವರಿಯಾಗಿ 6 ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಅದಲ್ಲದೇ ರಸ್ತೆಗಳಲ್ಲಿ ಬಿದ್ದಂತಹ ಮರಗಳನ್ನು ಕೂಡಲೆ ತೆರವುಗೊಳಿಸಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಠಿಯಿಂದ ವಲಯವಾರು 8 ದ್ವಿಚಕ್ರ ವಾಹನಗಳ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತದೆ.

ಮರ, ರೆಂಬೆ/ಕೊಂಬೆ ತೆರವು ಕಾರ್ಯಾಚರಣೆಗಾಗಿ 8 ಟ್ರ್ಯಾಕ್ಟರ್, 2 ಜೆಸಿಬಿ, 2 ಕ್ರೇನ್, ಅವಶ್ಯಕ ಸಲಕರಣೆಗಳು ಹಾಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಬಿದ್ದಂತಹ ಮರ, ರೆಂಬೆ-ಕೊಂಬೆಗಳ ವಿಲೇವಾರಿಗಾಗಿ ಆಯಾ ವಲಯಗಳಲ್ಲಿ ಡಂಪಿಂಗ್ ಯಾರ್ಡ್ಗಳ ವ್ಯವಸ್ಥೆ ಮಾಡಿಕೊಳ್ಳಲು ಉಪ ಅರಣ್ಯ ಸಂರಕ್ಷಾಧಿಕಾರಿಗೆ ಸೂಚನೆ ನೀಡಿದರು.

ಅಗ್ನಿಶಾಮಕ/ಎಸ್.ಡಿ.ಆರ್.ಎಫ್ ಜೊತೆ ಸಂಪರ್ಕ:

ಮಳೆಗಾಲದ ವೇಳೆ ಪಾಲಿಕೆಯ ಜೊತೆ ಅಗ್ನಿ ಶಾಮಕ ಠಾಣೆ ಹಾಗೂ ಎಸ್.ಡಿ.ಆರ್.ಎಫ್ ಇಲಾಖೆಗಳು ಕೈಜೋಡಿಸಲಿದ್ದಾರೆ. ಈ ಸಂಬಂಧ ಆಯಾ ವಲಯ ಆಯುಕ್ತರು ಅಗ್ನಿ ಶಾಮಕ ಠಾಣೆ ಸ್ಥಳಗಳಿಗೆ ಭೇಟಿ ನೀಡಿ ಸದರಿ ಇಲಾಖೆಗಳ ಜೊತೆ ನಿತ್ಯ ಸಂಪರ್ಕದಲ್ಲಿರಬೇಕು. ತುರ್ತು ಪರಿಸ್ಥಿತಿಯ ವೇಳೆ ಸದರಿ ಇಲಾಖೆಗಳ ಸಹಾಯ ಪಡೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ಸೂಚನೆ ನೀಡಿದರು.

ವ್ಯಾಟ್ಸಪ್ ಗ್ರೂಪ್‌ಗಳನ್ನು ರಚಿಸಿ:

ನಗರದಲ್ಲಿ ಮಳೆಗಾಲದ ವೇಳೆ ನಾಗರೀಕರ ಸಮಸ್ಯೆಗೆ ಕೂಡಲೆ ಸ್ಪಂದಿಸುವ ನಿಟ್ಟಿನಲ್ಲಿ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳನ್ನು ಒಳಗೊಂಡಂತೆ ಆಯಾ ವಲಯದ ಉಪ ವಿಭಾಗವಾರು ವ್ಯಾಟ್ಸಪ್ ಗ್ರೂಪ್‌ಗಳನ್ನು ರಚಿಸಿಕೊಂಡು, ಅದರ ಮೂಲಕ ಬಂದಂತರ ದೂರು, ಸಮಸ್ಯೆಗಳನ್ನು ಕೂಡಲೆ ಇತ್ಯರ್ಥಪಡಿಸಬೇಕೆಂದು ಸೂಚನೆ ನೀಡಿದರು.

ಕಟ್ಟಡ ನಿರ್ಮಾಣ ಭಗ್ನಾವಶೇಷ ಸುರಿದರೆ ದಂಡ ವಿಧಿಸಿ:

ನಗರದ ರಸ್ತೆ ಬದಿ, ಇಕ್ಕೆಲಗಳಲ್ಲಿ, ರಾಜಕಾಲುವೆಗಳಲ್ಲಿ/ರಾಜಕಾಲುವೆಗಳ ಪಕ್ಕದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಭಗ್ನಾವಶೇಷಗಳನ್ನು ಹಾಕಿದರೆ ದಂಡ ವಿಧಿಸಬೇಕು. ಈ ಸಂಬಂಧ ಕಟ್ಟಡ ಭಗ್ನಾವಶೇಷಗಳ ವಿಲೇವಾರಿ ಮಾಡುವವರ ಮೇಲೆ ಘನತ್ಯಾಜ್ಯ ವಿಭಾಗವು ಸಕ್ರಿಯವಾಗಿ ನಿಗಾವಹಿಸಿ ಅನಧಿಕೃತ ಸ್ಥಳದಲ್ಲಿ ಸುರಿಯದಂತಹವರಿಗೆ ದಂಡ ವಿಧಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ವಿಪತ್ತು ನಿರ್ವಹಣೆಯ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್, ಎಲ್ಲಾ ವಲಯ ಆಯುಕ್ತರು, ಎಲ್ಲಾ ವಲಯ ಜಂಟಿ ಆಯುಕ್ತರು, ಪ್ರಧಾನ ಅಭಿಯಂತರರು, ಎಲ್ಲಾ ವಲಯ ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು ರಾಜ್ಯದ ವಿವಿಧೆಡೆ ಧಾರಾಕಾರ ಮಳೆ; ಎಲ್ಲೆಲ್ಲಿ ವರುಣಾರ್ಭಟ?

ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಮತದಾನಕ್ಕೆ ಅನುಮತಿ ನೀಡಿದ ಹೈಕೋರ್ಟ್

Share. Facebook Twitter LinkedIn WhatsApp Email

Related Posts

ಕರ್ನಾಟಕದಲ್ಲಿ `ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ’ಗೆ ಈ ವಿದ್ಯಾರ್ಹತೆ, ಮಾನದಂಡ ಕಡ್ಡಾಯ !

05/03/2026 11:55 AM3 Mins Read

ಗದಗದಲ್ಲಿ ಭೀಕರ ಅಪಘಾತ : ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವು, 8 ಜನರಿಗೆ ಗಾಯ!

05/03/2026 11:30 AM1 Min Read

ರಾಜ್ಯದಲ್ಲಿ ಅಮಾನವೀಯ ಘಟನೆ : ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಆಸೆ ತೋರಿಸಿ, ಶೌಚಾಲಯ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕ!

05/03/2026 11:19 AM1 Min Read
Recent News

ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಾಮಾನ್ಯ ಕಾರ್ಯಕರ್ತರಿಗೆ ಲಕ್; ದಿಗ್ಗಜರನ್ನು ಬದಿಗೊತ್ತಿ ಹೊಸಬರಿಗೆ ಮಣೆ!

05/03/2026 11:58 AM

ಕರ್ನಾಟಕದಲ್ಲಿ `ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ’ಗೆ ಈ ವಿದ್ಯಾರ್ಹತೆ, ಮಾನದಂಡ ಕಡ್ಡಾಯ !

05/03/2026 11:55 AM

ನಿತೀಶ್ ಕುಮಾರ್ ಹಾದಿಗೆ ಸ್ವಪಕ್ಷೀಯರ ಅಡ್ಡಿ? ರಾಜ್ಯಸಭೆ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಬೆಂಬಲಿಗರಿಂದ ಭಾರಿ ಪ್ರತಿಭಟನೆ!

05/03/2026 11:45 AM

ವಿಶ್ವಕ್ಕೆ ನಡುಕ ಹುಟ್ಟಿಸಿದ ಅಮೇರಿಕಾದ ‘ಡೂಮ್ಸ್‌ಡೇ’ ಕ್ಷಿಪಣಿ ಪರೀಕ್ಷೆ: ಇರಾನ್ ಸಂಘರ್ಷದ ನಡುವೆಯೇ ನ್ಯೂಕ್ಲಿಯರ್ ಸಾಮರ್ಥ್ಯದ ಮಿನಿಟ್‌ಮನ್-3 ಉಡಾವಣೆ!

05/03/2026 11:39 AM
State News
KARNATAKA

ಕರ್ನಾಟಕದಲ್ಲಿ `ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ’ಗೆ ಈ ವಿದ್ಯಾರ್ಹತೆ, ಮಾನದಂಡ ಕಡ್ಡಾಯ !

By kannadanewsnow5705/03/2026 11:55 AM KARNATAKA 3 Mins Read

ಬೆಂಗಳೂರು: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರವು ಕಟ್ಟುನಿಟ್ಟಿನ…

ಗದಗದಲ್ಲಿ ಭೀಕರ ಅಪಘಾತ : ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವು, 8 ಜನರಿಗೆ ಗಾಯ!

05/03/2026 11:30 AM

ರಾಜ್ಯದಲ್ಲಿ ಅಮಾನವೀಯ ಘಟನೆ : ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಆಸೆ ತೋರಿಸಿ, ಶೌಚಾಲಯ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕ!

05/03/2026 11:19 AM

ಹಾವೇರಿ : ಕರ್ತವ್ಯ ಲೋಪ ಹಿನ್ನಲೆ, ಗುತ್ತಲ ಠಾಣೆ PSI ಸಸ್ಪೆಂಡ್ ಮಾಡಿ ಆದೇಶ

05/03/2026 11:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.