ಕೊಪ್ಪಳ: ಜಿಲ್ಲೆಯ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿತ್ತು. ಆ ಬಳಿಕ ಇಂದು ಕೊಚ್ಚಿ ಹೋಗಿದ್ದಂತ ಗೇಟ್ ಪತ್ತೆ ಕೂಡ ಆಗಿತ್ತು. ಇದರ ನಡುವೆ ಸತತ 3 ದಿನಗಳ ಗೇಟ್ ದುರಸ್ಥಿ ಕಾರ್ಯದರ ಬಳಿಕ ಐದು ಎಲಿಮಂಟ್ ಗೇಟ್ ಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಡ್ಯಾಂನಿಂದ ಹೊರ ಬಿಡಲಾಗುತ್ತಿತ್ತು. ಇತರೆ ಗೇಟ್ ಮೇಲಿನ ಒತ್ತಡ ತಡೆಯುವುದಕ್ಕಾಗಿ ಎಲ್ಲಾ ಗೇಟ್ ಗಳನ್ನು ಓಪನ್ ಮಾಡಿ ನದಿಗೆ ನೀರು ಹೊರ ಬಿಡಲಾಗಿತ್ತು.
ಸತತ ಮೂರು ದಿನಗಳಿಂದ ಸಾಪ್ಟ್ ಗೇಟ್ ಅಳವಡಿಕೆ ಕಾರ್ಯದಲ್ಲಿ ತಂತ್ರಜ್ಞರು ತೊಡಗಿದ್ದರು. ಇಂದು ಐದು ಎಲಿಮೆಂಟ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟಾಪ್ ಲಾಗ್ ಗೇಟ್ ಐದು ಎಲಿಮೆಂಟ್ ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ತುಂಗಭದ್ರಾ ಡ್ಯಾಂನ 19ನೇ ಗೇಟ್ ಸಂಪೂರ್ಣ ದುರಸ್ಥಿ ಕಾರ್ಯ ಮುಕ್ತಾಯಗೊಂಡಿದ್ದು, ಲೀಕೇಜ್ ಬಿಟ್ಟರೇ ಹೊರ ಹರಿವು ಬಹುತೇಕ ಬಂದ್ ಮಾಡುವಲ್ಲಿ ಸಿಬ್ಬಂದಿಗಳು ಇಂದು ಯಶಸ್ವಿಯಾಗಿದ್ದಾರೆ.
ಅಂದಹಾಗೇ 35 ಟಿಎಂಸಿ ನೀರು ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದರಿಂದ ಪೋಲಾಗಿದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಫಾಕ್ಸ್ ಕಾನ್ ನಿಂದ ರಾಜ್ಯದಲ್ಲಿ 2ನೇ ಬೃಹತ್ iPhone ತಯಾರಿಕಾ ಘಟಕ ಆರಂಭ: 40 ಸಾವಿರ ಉದ್ಯೋಗ ಸೃಷ್ಠಿ