ಬೆಂಗಳೂರು: ತುಂಗಭದ್ರಾ ಡ್ಯಾಂ 19ನೇ ಕ್ರಸ್ಟ್ ಗೇಟ್ ದುರಸ್ಥಿ ಕಾರ್ಯ ಯಶಸ್ವಿಯಾಗಿದೆ. ಸಂಪೂರ್ಣ ಗೇಟ್ ದುರಸ್ಥಿ ಕಾರ್ಯ ನಡೆದು, ಮುಕ್ತಾಯಗೊಂಡಿದೆ. ಹೀಗಾಗಿ ತುಂಗಭದ್ರಾ ಡ್ಯಾಂನಿಂದ ಹೊರ ಹರಿಯುತ್ತಿದ್ದಂತ ನೀರು ಸಂಪೂರ್ಣ ಬಂದ್ ಆಗಿದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಇಂದು ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ತುಂಗಭದ್ರಾ ಡ್ಯಾಂ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋದಿದ್ದರಿಂದ ಈವರೆಗೆ 35 ಟಿಎಂಸಿ ನೀರು ತುಂಗಭದ್ರಾ ಡ್ಯಾಂನ 19ನೇ ಗೇಟ್ ಕೊಟ್ಟಿ ಹೋಗಿದ್ದರಿಂದ ಹೊರ ಹೋಗಿದೆ. ಆದರೂ 65 ಸಾವಿರ ಕ್ಯೂಸೆಕ್ಟ್ ಒಳ ಹರಿವು ಡ್ಯಾಂಗೆ ಇದೆ. ಹೀಗಾಗಿ ರೈತರ ಬೆಳೆಗಳಿಗೆ ಯಾವುದೇ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದರು.
ಇನ್ನೂ ಸತತ ಮೂರು ದಿನಗಳಿಂದ ತುಂಗಭದ್ರಾ ಡ್ಯಾಂನ 19ನೇ ಸಾಪ್ಟ್ ಗೇಟ್ ಅಳವಡಿಕೆ ಕಾರ್ಯದಲ್ಲಿ ತಂತ್ರಜ್ಞರು ತೊಡಗಿದ್ದರು. ಇಂದು ಐದು ಎಲಿಮೆಂಟ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟಾಪ್ ಲಾಗ್ ಗೇಟ್ ಐದು ಎಲಿಮೆಂಟ್ ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ತುಂಗಭದ್ರಾ ಡ್ಯಾಂನ 19ನೇ ಗೇಟ್ ಸಂಪೂರ್ಣ ದುರಸ್ಥಿ ಕಾರ್ಯ ಮುಕ್ತಾಯಗೊಂಡಿದ್ದು, ಲೀಕೇಜ್ ಬಿಟ್ಟರೇ ಹೊರ ಹರಿವು ಬಹುತೇಕ ಬಂದ್ ಮಾಡುವಲ್ಲಿ ಸಿಬ್ಬಂದಿಗಳು ಇಂದು ಯಶಸ್ವಿಯಾಗಿದ್ದಾರೆ.
BREAKING: ನನ್ನ ತೇಜೋವಧೆ ಸಾಧ್ಯವಿಲ್ಲ, ಈ ಪ್ರಯತ್ನ ಯಶಸ್ವಿಯಾಗಲ್ಲ: ಸಿಎಂ ಸಿದ್ಧರಾಮಯ್ಯ ಗುಡುಗು
ಫಾಕ್ಸ್ ಕಾನ್ ನಿಂದ ರಾಜ್ಯದಲ್ಲಿ 2ನೇ ಬೃಹತ್ iPhone ತಯಾರಿಕಾ ಘಟಕ ಆರಂಭ: 40 ಸಾವಿರ ಉದ್ಯೋಗ ಸೃಷ್ಠಿ