ತುಮಕೂರು : ತುಮಕೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಶೇಂಗಾ ಕಾವಲಿಗೆ ಹೋಗಿದ್ದ ವೇಳೆ ವಿದ್ಯುತ್ ಶಾಕ್ ನಿಂದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ತುಮಕೂರು ಜಿ್ಲ್ಲೆಯ ಪಾವಗಡ ತಾಲೂಕಿನ ಟಿ.ಎನ್. ಬಟ್ಟ ದುರಂತ ನಡೆದಿದ್ದು, ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಗ್ರಾಮದ ಅನಿಲ್(29), ಪುಟ್ಟರಾಜು(34) ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ಶೇಂಗಾ ಬೆಳೆ ಕಾವಲಿಗಾಗಿ ಅನಿಲ್ ಮತ್ತು ಪುಟ್ಟರಾಜು ಜಮೀನಿನ ಬಳಿ ಹೋಗಿದ್ದು, ಕಾಡು ಹಂದಿ-ಕರಡಿಗಳು ಬಾರದಂತೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಪುಟ್ಟರಾಜು ಮೃತಪಟ್ಟಿದ್ದಾರೆ.ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.