ತುಮಕೂರು: ಜಿಲ್ಲೆಯಲ್ಲಿ ಧಾರುಣ ಘಟನೆಯೊಂದು ನಡೆದಿದೆ. ಕರೆಗೆ ಕಾಲು ಜಾರಿ ಬಿದ್ದಂತ ಮಗಳನ್ನು ರಕ್ಷಣೆ ಮಾಡೋದಕ್ಕೆ ಇಳಿದಂತ ತಂದೆಯೂ ನೀರಲ್ಲಿ ಮುಳುಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮಕ್ಕೆ ಬೆಂಗಳೂರಿನ ಶಿವಾಜಿನಗರದಿಂದ ಸಂಬಂಧಿಕರ ಮನೆಗೆ ಫಿರ್ದೋಸ್ ಹಾಗೂ ಮಗಳು ಆಯಿಜಾ ತೆರಳಿದ್ದರು.
ಇಂದು ತುಂಬಾಡಿಯಲ್ಲಿನ ಕೆರೆಯನ್ನು ನೋಡೋದಕ್ಕೆ ತೆರಳಿದ್ದಾಗ 6 ವರ್ಷದ ಅಯಿಜಾ ಕಾಲು ಜಾರಿ ಬಿದ್ದಿದ್ದಳು. ಮಗಳನ್ನು ರಕ್ಷಣೆ ಮಾಡುವುದಕ್ಕೆ ತಂದೆ ಫಿರ್ದೋಸ್ ಕೂಡ ನೀರಿಗೆ ಇಳಿದಿದ್ದರು. ಈ ವೇಳೆ ಕೆರೆಯ ನೀರು ಆಳವಿದ್ದ ಕಾರಣ, ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ಐಪಿಎಲ್ 2025ರ RCB ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಲ್ವಿ ನೇಮಕ | Omkar Salvi
‘ಒಂದೇ ದಿನದಲ್ಲಿ 5 ಲಕ್ಷ ನಾಗರಿಕರು ಪ್ರಯಾಣ’ : ಇತಿಹಾಸ ನಿರ್ಮಿಸಿದ ‘ಭಾರತೀಯ ವಾಯುಯಾನ’