ತುಮಕೂರು: ಜಿಲ್ಲೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ನಾಳೆ ತುಮಕೂರು ಜಿಲ್ಲೆ ಬಂದ್ ಗೆ ಕರೆ ನೀಡಲಾಗಿದೆ. ನಾಳಿನ ತುಮಕೂರು ಬಂದ್ ಗೆ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದಾವೆ.
ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಹೋರಾಟ ಸಮಿತಿಯಿಂದ ಬಂದ್ ಗೆ ಕರೆ ನೀಡಲಾಗಿದೆ. ಇದಕ್ಕೆ ರೈತಪರ, ಕನ್ನಡಪರ ಸಂಘಟನೆಗಳು, ವಕೀಲರ ಸಂಘ, ಹೋಟೆಲ್ ಅಸೋಷಿಯೇಷನ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದಾವೆ.
ನಾಳೆ ಬೆಳಿಗ್ಗೆ 10 ಗಂಟೆಗೆ ಟೌನ್ ಹಾಲ್ ನಿಂದ ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಕಾರರು ತೆರಳಲಿದ್ದಾರೆ. ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಲ್ಲೂ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗೋ ಸಾಧ್ಯತೆ ಇದೆ.
ಅದರಲ್ಲೂ ಹೇಮಾವತಿ ಲಿಂಕ್ ನಾಲಾ ವ್ಯಾಪ್ತಿಯ ಗುಬ್ಬಿ, ತುರುವೇಕೆರೆ ತಾಲೂಕು ಹಾಗೂ ತುಮಕೂರು ನಗರದಲ್ಲಿ ನಾಳೆಯ ಬಂದ್ ಗೆ ಅತಿಹೆಚ್ಚು ಬೆಂಬಲ ವ್ಯಕ್ತವಾಗೋ ಸಾಧ್ಯತೆ ಇದೆ.
ನಾಳೆ ತುಮಕೂರು ನಗರ ಸೇರಿದಂತೆ 10 ತಾಲ್ಲೂಕಿನಲ್ಲಿ ಹೇಮಾವತಿ ಲಿಂಕ್ ವಿರೋಧಿಸಿ ಬಂದ್ ಗೆ ಹೋರಾಟಗಾರರು ಸಿದ್ಧತೆ ಕೈಗೊಂಡಿದ್ದಾರೆ. ಟೌನ್ ಹಾಲ್ ನಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲಿರುವಂತ ಹೋರಾಟ ಸಮಿತಿ ನಾಯಕರು, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.
ನಾಳೆ ತುಮಕೂರು ಜಿಲ್ಲೆ ಬಂದ್ ಘೋಷಣೆಯ ಹಿನ್ನಲೆಯಲ್ಲಿ ಎಲ್ಲೆಡೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಿದ್ರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವೆಂಕಟ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ನಗರ, ಗುಬ್ಬಿ ಹಾಗೂ ತುರುವೇಕೆರೆ ವ್ಯಾಪ್ತಿಯಲ್ಲಿ ಬಂದ್ ತೀವ್ರ ಸ್ವರೂಪದಲ್ಲಿ ನಡೆಯೋ ಸಾಧ್ಯತೆ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರಕ್ಕೆ ಸೂಚಿಸಿದ್ದಾರೆ.
ನಾನು ಅಧಿಕಾರಕ್ಕಾಗಿ ಚನ್ನಪಟ್ಟಣ ಬಿಟ್ಟು ಓಡಿ ಹೋಗುವವನಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
BREAKING: ರಾಜ್ಯ ಸರ್ಕಾರದಿಂದ ‘ಗ್ರಾ.ಪಂ ಕಾರ್ಯದರ್ಶಿ’ಗಳನ್ನು ಜನನ, ಮರಣ ‘ಉಪ ನೋಂದಣಾಧಿಕಾರಿ’ಗಳನ್ನಾಗಿ ನೇಮಿಸಿ ಆದೇಶ