ತುಮಕೂರು: ಇಂದು ತುಮಕೂರು ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಮತ್ತೆ ಕೆ.ಎನ್ ರಾಜಣ್ಣ ಟೀಂ ಭರ್ಜರಿ ಗೆಲುವು ಸಾಧಿಸಿದೆ. ಇಂದು ನಡೆದಂತ 6 ತಾಲ್ಲೂಕಿನ ಚುನಾವಣೆಯಲ್ಲೂ ಕೆ.ಎನ್ ರಾಜಣ್ಣ ಬೆಂಬಲಿಗರೇ ಗೆಲುವು ಸಾಧಿಸಿದ್ದಾರೆ.
ಇಂದು ನಡೆದಂತ ತುಮಕೂರು ಡಿಸಿಸಿ ಬ್ಯಾಂಕಿನ 6 ತಾಲ್ಲೂಕುಗಳ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಎಲ್ಲಾ ಆರು ಕಡೆಯಲ್ಲಿ ಕೆ.ಎನ್ ರಾಜಣ್ಣ ಅವರ ಬೆಂಬಲಿಗರು ವಿಜಯ ಸಾಧಿಸಿದ್ದಾರೆ. ಹೀಗಾಗಿ ಬರೋಬ್ಬರಿ ಐದು ಬಾರಿಗೆ ಕೆ.ಎನ್ ರಾಜಣ್ಣ ಅವರು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಪಟ್ಟಕ್ಕೇರಲಿದ್ದಾರೆ.
ಅಂದಹಾಗೇ ಈಗಾಗಲೇ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಐದು ಬಾರಿ ಸತತ 25 ವರ್ಷಗಳ ಕಾಲ ಹಿಡಿತ ಹೊಂದಿದ್ದರು. ಇದೀಗ 6 ತಾಲ್ಲೂಕಿನ ಚುನಾವಣೆಯಲ್ಲಿ ಎಲ್ಲಾ ಕಡೆಯಲ್ಲೂ ಕೆ.ಎನ್ ರಾಜಣ್ಣ ಬೆಂಬಲಿಗರೇ ಗೆಲುವು ಸಾಧಿಸಿದ್ದರಿಂದ, ಆರನೇ ಬಾರಿಗೂ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎನ್ ರಾಜಣ್ಣ ಗದ್ದುಗೆ ಏರಲಿದ್ದಾರೆ.
ಅಂದಹಾಗೇ ಎ ವರ್ಗದಿಂದ ತುಮಕೂರು ತಾಲ್ಲೂಕು ಚುನಾವಣೆಗೆ ಕೆ.ಎನ್ ರಾಜಣ್ಣ, ಮಧುಗಿರಿ ತಾಲ್ಲೂಕಿನಿಂದ ಜಿ.ಜಿ ರಾಜಣ್ಣ, ಕೊರಟಗೆರೆಯಿಂದ ಎಸ್ ಹನುಮಾನ್ ಮತ್ತು ತುರುವೇಕೆರೆ ತಾಲ್ಲೂಕಿಂದ ಎಂ.ಸಿದ್ದಲಿಂಗಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಬಿ ವರ್ಗದಿಂದ 10 ತಾಲ್ಲೂಕು ವ್ಯವಸಾಯ ಉತ್ಪನ್ನಗಳ ಮಾರಾಟ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಕೆ.ಎನ್ ರಾಜಣ್ಣ ಅವರ ಪುತ್ರ ರಾಜೇಂದ್ರ ಆಯ್ಕೆಯಾಗಿದ್ದರೇ, ಸಿ ವರ್ಗದಿಂದ ಪಟ್ಟಣ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಎನ್ ಲಕ್ಷ್ಮಿನಾರಾಯಣ್ ಆಯ್ಕೆಯಾಗಿದ್ದಾರೆ.
ಡಿ ವರ್ಗದಿಂದ ಹಾಲು ಉತ್ಪಾದಕರ ಸಂಘಗಳ ಕ್ಷೇತ್ರದಿಂದ ಮಧುಗಿರಿಯ ಬಿ ನಾಗೇಶ್ ಬಾಬು, ಡಿ-1 ವರ್ಗದ ಮಹಿಳಾ ಸಂಘಗಳ ಪ್ರತಿನಿಧಿಯಾಗಿ ಮಾಲತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ತುಮಕೂರು ಡಿಸಿಸಿ ಬ್ಯಾಂಕ್ ಆರು ತಾಲ್ಲೂಕಿಗೆ ಮತದಾನ ನಡೆದಿತ್ತು. ಈ ಆರು ಕಡೆಯಲ್ಲಿ ಕೆ.ಎನ್ ರಾಜಣ್ಣ ಅವರ ಬೆಂಬಲಿಗರೇ ಗೆದ್ದು ಬೀಗಿದ್ದಾರೆ.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆರೋಪ ಪ್ರಕರಣ: ಯೂಟ್ಯೂಬರ್ ಸಮೀರ್ ಎಂ.ಡಿ ಇಂದಿನ ವಿಚಾರಣೆ ಅಂತ್ಯ
BIG NEWS : ಸಂದರ್ಭ ಬಂದಾಗ ಡಿಸಿಎಂ ಡಿಕೆ ಶಿವಕುಮಾರ್ ‘CM’ ಆಗ್ತಾರೆ : ಸಚಿವ ಚೆಲುವರಾಯಸ್ವಾಮಿ ಹೇಳಿಕೆ