ಶಿವಮೊಗ್ಗ: ಸಾಗರದಿಂದ ಸಿಗಂದೂರಿಗೆ ಹೊರಟ ಭಕ್ತರಿದ್ದ ಟಿಟಿ ವಾಹನ ಪಲ್ಟಿಯಾದ ಪರಿಣಾಮ ಘಟನೆಯಲ್ಲಿ ಚಾಲಕ ಸೇರಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಿಂದ ರೈಲಿನ ಮೂಲಕ ಸಾಗರಕ್ಕೆ ಆಗಮಿಸಿದ್ದ 12 ಮಂದಿ ಮಹಿಳೆಯರು ಸಾಗರದಿಂದ ವಾಹನ ಮಾಡಿಕೊಂಡು ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಹೊರಟ್ಟಿದ್ದ ವೇಳೇಯಲ್ಲಿ . ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಸಿಗಂದೂರು ರಸ್ತೆಯ ಕೂರನಕೊಪ್ಪ ಸಮೀಪ ಪಲ್ಟಿಯಾಗಿದೆ ಎನ್ನಲಾಗಿದೆ.
ಸದ್ಯ ಗಗಾಯಾಳುಗಳನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಅಂತ ತಿಳಿದು ಬಂದಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.