ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಈಗ ಯಾರಿಗೆ ಕೇಳಿದರೂ ಶೀತ, ಕೆಮ್ಮು, ಜ್ವರ, ತಲೆ ನೋವು ಅಂತ ಹೇಳ್ತಾರೆ. ಕೆಲವೊಮ್ಮೆ ಜ್ವರ ಕಡಿಮೆಯಾದರೂ ಶೀತ ಹಾಗು ತಲೆಭಾರ ಮಾತ್ರ ಕಡಿಮೆಯಾಗುವುದಿಲ್ಲ. ಇದಕ್ಕೆ ಮಾತ್ರೆಗಳ ಬದಲಾಗಿ ಈ ಕೆಳಗಿನ ಮನೆಮದ್ದು ಟ್ರೈ ಮಾಡಿ ನೋಡಿ.
ಶೀತಕ್ಕೆ ಗಿಡ ಮೂಲಿಕೆಗಳ ಚಹಾ ಸೇವನೆ ಅತ್ಯುತ್ತಮ. ಅಂದರೆ ಲೆಮನ್ ಟೀ, ಗ್ರೀನ್ ಟೀ ಸೇವಿಸಿ. ಶುಂಠಿ ಟೀ ಸಹ ಶೀತಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಶುಂಠಿ ಟೀ ಕಫವನ್ನು ಕರಗಿಸಿ ಹೊರ ಹಾಕುತ್ತದೆ ಹಾಗು ಗಂಟಲಿನ ಇನ್ಫೆಕ್ಷನ್ ಕಡಿಮೆ ಮಾಡುತ್ತದೆ.
ಅರಿಶಿನ ಹಾಲು ಶೀತಕ್ಕೆ ತುಂಬಾ ಪರಿಣಾಮಕಾರಿಯಾದ ಮನೆಮದ್ದು. ನಿಮಗೆ ವಿಪರೀತ ಶೀತ ಹಾಗು ತಲೆ ನೋವಿದ್ದರೆ ದಿನಕ್ಕೆ ಎರಡು ಬಾರಿ ಅರಿಶಿನ ಹಾಲು ಸೇವಿಸಿ ಮೂರನೇ ದಿನಕ್ಕೆ ನೀವು ಸಂಪೂರ್ಣವಾಗಿ ಆರಾಮಾಗುತ್ತೀರಿ.
ಕಾಳು ಮೆಣಸು ಸೇವನೆ ದೇಹದಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ದೇಹಕ್ಕೆ ಬಂದಿರುವ ಎಂತಹ ಸೋಂಕನ್ನು ಇದು ಹೋಗಲಾಡಿಸುತ್ತದೆ. ಶೀತವಾದಾಗ ಇದರ ಸೇವನೆ ದೇಹಕ್ಕೆ ಹೆಚ್ಚು ಊಷ್ಣ ನೀಡುತ್ತದೆ. ಮೂಗಿನಲ್ಲಿ ಎದೆಯಲ್ಲಿ ಕಫ ಕಟ್ಟಿದರೆ ಮೆಣಸಿನ ಅಡುಗೆ ಸೇವಿಸಿದರೆ ಕಫ ಕರಗುತ್ತದೆ.
ಹಾಲಿನ ಚಹಾ ಕುಡಿಯುವಾಗ ಚಿಟಿಕೆ ಮೆಣಸಿನ ಪುಡಿ, ಶುಂಠಿ ಹಾಕಿ ಅದಕ್ಕೆ ಸಾವಯವ ಬೆಲ್ಲ ಸೇರಿಸಿ ಚಹಾ ಮಾಡಿ ಕುಡಿದರೆ ಶೀತ ಹಾಗು ತಲೆ ಭಾರ ಕಡಿಮೆಯಾಗುತ್ತದೆ. ಹಾಗು ಈ ಎಲ್ಲಾ ಪದಾರ್ಥಗಳು ದೇಹಕ್ಕೆ ರೋಗ ನಿರೋಧಕ ಶಕ್ತಿ ನೀಡುತ್ತವೆ.
ವಿಟಮಿನ್ ಸಿ ಅಧಿಕವಾಗಿರುವ ಹಣ್ಣು, ತರಕಾರಿಗಳನ್ನು ಹೆಚ್ಚಿ ಪ್ರಮಾಣದಲ್ಲಿ ಸೇವಿಸಿ. ಮುಖ್ಯವಾಗಿ ಕಿತ್ತಳೆ, ದ್ರಾಕ್ಷಿ. ನಿಂಬೆ ರಸದ ಶರಬತ್ತು, ಬ್ರಾಕೋಲಿ, ಪೇರಳೆ, ದಪ್ಪ ಮೆಣಸಿನಕಾಯಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇವುಗಳನ್ನು ಶೀತ ತಲೆನೋವು ಕಡಿಮೆ ಆಗುವವರೆಗೂ ನಿತ್ಯವೂ ಸೇವಿಸಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.