ಜೆರುಸಲೇಂ: ಗಾಝಾದಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಫೆಲೆಸ್ತೀನ್ ಉಗ್ರಗಾಮಿ ಗುಂಪನ್ನು ಒತ್ತಾಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಮಾಸ್ ಗೆ ತಮ್ಮ ಕೊನೆಯ ಎಚ್ಚರಿಕೆಯನ್ನು ಭಾನುವಾರ ನೀಡಿದ್ದಾರೆ.
ಇಸ್ರೇಲಿಗಳು ನನ್ನ ಷರತ್ತುಗಳನ್ನು ಒಪ್ಪಿಕೊಂಡಿದ್ದಾರೆ. ಹಮಾಸ್ ಕೂಡ ಇದನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ” ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಒಪ್ಪಿಕೊಳ್ಳದ ಪರಿಣಾಮಗಳ ಬಗ್ಗೆ ನಾನು ಹಮಾಸ್ಗೆ ಎಚ್ಚರಿಕೆ ನೀಡಿದ್ದೇನೆ. ಇದು ನನ್ನ ಕೊನೆಯ ಎಚ್ಚರಿಕೆ, ಇನ್ನೊಂದು ಇರುವುದಿಲ್ಲ!”
ಟ್ರಂಪ್ ಹಮಾಸ್ಗೆ ಹೊಸ ಕದನ ವಿರಾಮ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ ಎಂದು ಇಸ್ರೇಲ್ನ ಎನ್ 12 ನ್ಯೂಸ್ ಶನಿವಾರ ವರದಿ ಮಾಡಿದೆ.
ಒಪ್ಪಂದದ ಪ್ರಕಾರ, ಇಸ್ರೇಲ್ನಲ್ಲಿ ಜೈಲಿನಲ್ಲಿರುವ ಸಾವಿರಾರು ಫೆಲೆಸ್ತೀನ್ ಕೈದಿಗಳಿಗೆ ಪ್ರತಿಯಾಗಿ ಹಮಾಸ್ ಉಳಿದ ಎಲ್ಲಾ 48 ಒತ್ತೆಯಾಳುಗಳನ್ನು ಕದನ ವಿರಾಮದ ಮೊದಲ ದಿನದಂದು ಬಿಡುಗಡೆ ಮಾಡುತ್ತದೆ ಮತ್ತು ಎನ್ಕ್ಲೇವ್ನಲ್ಲಿ ಕದನ ವಿರಾಮದ ಸಮಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸುತ್ತದೆ ಎಂದು ಎನ್ 12 ವರದಿ ಮಾಡಿದೆ.
ಟ್ರಂಪ್ ಅವರ ಪ್ರಸ್ತಾಪವನ್ನು ಇಸ್ರೇಲ್ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಹೇಳಿದರು