ವಾಷಿಂಗ್ಟನ್: ಇರಾನ್ ವಿರುದ್ಧದ ಆರ್ಥಿಕ ದಿಗ್ಬಂಧನ ಮತ್ತು ಇಂಧನ ವಲಯದ ಮೇಲಿನ ದಾಳಿಯ ಎಚ್ಚರಿಕೆಯ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮುಂದಿನ ಕಠಿಣ ಕ್ರಮಗಳನ್ನು ತಾತ್ಕಾಲಿಕವಾಗಿ ವಿಳಂಬಗೊಳಿಸಿದ್ದಾರೆ. ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಭಾರಿ ಏರಿಳಿತ (Market Volatility) ಮತ್ತು ಬೆಲೆ ಏರಿಕೆಯ ಭೀತಿಯೇ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಇರಾನ್‌ನ ತೈಲ ಕೇಂದ್ರಗಳ ಮೇಲೆ ದಾಳಿ ಅಥವಾ ಕಠಿಣ ನಿರ್ಬಂಧ ಹೇರಿದರೆ ಜಾಗತಿಕವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುವ ಆತಂಕವಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಆರ್ಥಿಕ ಹಿತದೃಷ್ಟಿಯಿಂದ ಟ್ರಂಪ್ ಈ ‘ವೇಯ್ಟ್ ಅಂಡ್ ವಾಚ್’ (ಕಾದು ನೋಡುವ) ತಂತ್ರ ಅನುಸರಿಸಿದ್ದಾರೆ.
ಇರಾನ್‌ಗೆ ಈಗಾಗಲೇ ಕಠಿಣ ಎಚ್ಚರಿಕೆ ನೀಡಿರುವ ಟ್ರಂಪ್, ಈಗಿನ ಮಾರುಕಟ್ಟೆ ಸ್ಥಿತಿಯನ್ನು ಗಮನಿಸಿ ತಮ್ಮ ಮುಂದಿನ ನಡೆಯನ್ನು ಯೋಜಿಸುತ್ತಿದ್ದಾರೆ. ಇದು ಯುದ್ಧದ ಭೀತಿಯನ್ನು ಸದ್ಯಕ್ಕೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.ಅಮೆರಿಕದ ಈ ನಿರ್ಧಾರದ ಬೆನ್ನಲ್ಲೇ ಕಚ್ಚಾ ತೈಲ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಕೇವಲ ಮಿಲಿಟರಿ ಶಕ್ತಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ಇರಾನ್ ಅನ್ನು ಹೇಗೆ ಕಟ್ಟಿಹಾಕಬೇಕು ಎಂಬ ಬಗ್ಗೆ ಅಮೆರಿಕ ತನ್ನ ಮಿತ್ರ ರಾಷ್ಟ್ರಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.








