ಬೆಂಗಳೂರು: ಇಂದು ಮುಂಜಾನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿ, ಬೆನ್ನು ಮೂಳೆ ಮುರಿತವಾಗಿದೆ. ಈ ದುರ್ಘಟನೆಗೂ ಮುನ್ನವೇ ಜ್ಯೋತಿಷಿ ಪುಂಡಲೀಕ ಶಾಸ್ತ್ರಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಂಕ್ರಾಂತಿಯವರೆಗೆ ತೊಂದರೆ ಇದೆ. ಹುಷಾರಾಗಿ ಇರಿ ಅಂತ ಭವಿಷ್ಯ ನುಡಿದಿದ್ದರಂತೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿ ಆಗ್ತಾರೆ. ಸಚಿವೆ ಆಗ್ತಾರೆ ಎಂಬುದಾಗಿ ಮೊದಲೇ ಭವಿಷ್ಯ ನುಡಿದಿದ್ದರಂತೆ. ಇದಲ್ಲದೇ ಸಂಕ್ರಾಂತಿವರೆಗೂ ತೊಂದರೆ ಇದೆ. ಹುಷಾರಾಗಿ ಇರುವಂತೆಯೂ ಸೂಚಿಸಿದ್ದಾಗಿ ತಿಳಿಸಿದ್ದಾರೆ.
ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಆದಷ್ಟು ಬೇಗ ಹುಷಾರಾಗಲಿ. ಗುಣಮುಖರಾಗಿ ಸಾರ್ವಜನಿಕ ಜೀವನಕ್ಕೆ ಬರಲಿ. ಒಳ್ಳೇದಾಗಲಿ ಎಂಬುದಾಗಿಯೂ ಜ್ಯೋತಿಷಿ ಪುಂಡಲೀಕ ಶಾಸ್ತ್ರಿ ತಿಳಿಸಿದರು.
BIG NEWS: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ: MLC ಚನ್ನರಾಜ ಹಟ್ಟಿಹೊಳಿ ಹೇಳಿದ್ದೇನು ಗೊತ್ತಾ?
‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ | Swarna Bindu Prashana