ಮೈಸೂರು: ನೈರುತ್ಯ ರೈಲ್ವೆ ವಾರಾಂತ್ಯಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ನಿರ್ವಹಿಸಲು ಹಾಗೂ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂನಲ್ಲಿ ನಡೆಯಲಿರುವ ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ, ಕೆ.ಎಸ್.ಆರ್. ಬೆಂಗಳೂರು – ಅಶೋಕಪುರಂ ನಡುವೆ ಟ್ರೈವೀಕ್ಲಿ ಕಾಯ್ದಿರಿಸದ ವಿಶೇಷ ಮೆಮು ರೈಲುಗಳನ್ನು (ರೈಲು ಸಂಖ್ಯೆ 06213/06214) ಸಂಚರಿಸಲು ನಿರ್ಧರಿಸಿದೆ.
ಈ ವಿಶೇಷ ರೈಲುಗಳು ಶುಕ್ರವಾರ, ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಸಂಚರಿಸಲಿದ್ದು, ಒಟ್ಟು 18 ಟ್ರಿಪ್ ಸಂಚರಿಸಲಿದೆ. ಈ ಸೇವೆಗಳು 2025ರ ನವೆಂಬರ್ 14ರಿಂದ ಡಿಸೆಂಬರ್ 28ರವರೆಗೆ ಮುಂದುವರೆಯಲಿವೆ. ಆದರೆ ನವೆಂಬರ್ 21, 22 ಮತ್ತು 23, 2025 ರಂದು ಈ ರೈಲುಗಳು ಸಂಚರಿಸವುದಿಲ್ಲ.
ರೈಲು ಸಂಖ್ಯೆ. 06213 ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದಿಂದ ಮಧ್ಯಾಹ್ನ 12:15 ಕ್ಕೆ ಹೊರಟು, ಮಧ್ಯಾಹ್ನ 3:40 ಕ್ಕೆ ಅಶೋಕಪುರಂ ತಲುಪಲಿದೆ.
ರೈಲು ಸಂಖ್ಯೆ. 06214 ಅಶೋಕಪುರಂನಿಂದ ಸಂಜೆ 4:10 ಕ್ಕೆ ಹೊರಟು, ರಾತ್ರಿ 8:00 ಕ್ಕೆ ಕೆ.ಎಸ್.ಆರ್. ಬೆಂಗಳೂರು ತಲುಪಲಿದೆ.
ಈ 8 ಕೋಚ್‌ಗಳ ಮೆಮು ವಿಶೇಷ ಕಾಯ್ದಿರಿಸದ ರೈಲು ತನ್ನ ಎರಡೂ ದಿಕ್ಕಿನ ಪ್ರಯಾಣದಲ್ಲಿ ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನಭಾರತಿ ಹಾಲ್ಟ್, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೊಹಳ್ಳಿ, ರಾಮನಗರಂ, ಚನ್ನಪಟ್ಟಣ, ಸೆಟ್ಟಿಹಳ್ಳಿ, ನಿಡಘಟ್ಟ ಹಾಲ್ಟ್, ಮದ್ದೂರು, ಹನಕೆರೆ, ಮಂಡ್ಯ, ಎಲಿಯೂರು, ಬ್ಯಾಡರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು ಮತ್ತು ಚಾಮರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಜ್ವಲಿಸಿದ ಕಬ್ಬು ಬೆಳೆಗಾರರ ಕಿಚ್ಚು: ಬೆಳಗಾವಿಯಲ್ಲಿ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳು ಬೆಂಕಿಗಾಹುತಿ
ಮುಧೋಳದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರುಗಳು ಬೆಂಕಿಗೆ ಆಹುತಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಘಾತ








