ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹೊಸ ಮೆಟ್ರೋ ಫೀಡರ್ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದ್ದಾರೆ. ಅಲ್ಲದೇ ಹೊಸ ಮಾರ್ಗದಲ್ಲಿ ಆರಂಭಗೊಂಡಿರುವಂತ ಹಳದಿ ಮಾರ್ಗದ ನಮ್ಮ ಮೆಟ್ರೋ ರೈಲಿನಲ್ಲಿಯೇ ರಾಮಲಿಂಗಾರೆಡ್ಡಿ ಅವರು ಪ್ರಯಾಣ ಮಾಡಿದರು.
ಇಂದು ಸಾರ್ವಜನಿಕ ಸೇವೆಗೆ ಮೆಟ್ರೋ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಂಸ್ಥೆಯು ಹಳದಿ ಮಾರ್ಗದಲ್ಲಿ ಪರಿಚಯಿಸಿರುವ ಹೊಸ ಮೆಟ್ರೋ ಫೀಡರ್ ಬಸ್ ಮಾರ್ಗಗಳ ಉದ್ಘಾಟನಾ ಸಮಾರಂಭವನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಲೋಕಾರ್ಪಣೆಗೊಳಿಸಿರುತ್ತಾರೆ.
ಈ ವೇಳೆ ಮಾತನಾಡಿದಂತ ಸಚಿವ ರಾಮಲಿಂಗಾರೆಡ್ಡಿ ಅವರು, ಬೆಂಗಳೂರು ಜನತೆಯ ಉದ್ದೇಶಕ್ಕಾಗಿ ಹೊಸದಾಗಿ ಹಳದಿ ಲೈನ್ ಮೆಟ್ರೋ ಸಂಚಾರ ಆರಂಭಗೊಂಡಿದೆ. ಈ ಮೆಟ್ರೋಗೆ ತೆರಳುವಂತ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿಯಿಂದ ಮೆಟ್ರೋ ಫೀಡರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಮೆಟ್ರೋ ಫೀಡರ್ ಬಿಎಂಟಿಸಿ ಬಸ್ಸು, ಹಳದಿ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿ ಗಮನ ಸೆಳೆದರು.
ಈ ಸಮಾರಂಭದಲ್ಲಿ ಮಾನ್ಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್.ಆರ್, ಭಾ.ಆ.ಸೇ; ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ; ಮಾಹಿತಿ ತಂತ್ರಜ್ಞಾನ ನಿರ್ದೇಶಕರು ಶಿಲ್ಪ ಎಂ., ಭಾ.ಆ.ಸೇ; ಭದ್ರತೆ ಮತ್ತು ಜಾಗೃತ ನಿರ್ದೇಶಕರಾದ ಅಬ್ದುಲ್ ಅಹದ್, ಭಾ.ಪೋ.ಸೇ; ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ ELCIA & ELCITA ಅಧಿಕಾರಿಗಳು ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಮತ್ತು ಸಂಸ್ಥೆಯ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.
ಧರ್ಮಸ್ಥಳ ಕೇಸ್: 13ನೇ ಪಾಯಿಂಟ್ ನಲ್ಲಿ GPR ಸ್ಕ್ಯಾನ್ ಮುಕ್ತಾಯ, ತಂತ್ರಜ್ಞರಿಂದ ಪೂಟೇಜ್ ಪರಿಶೀಲನೆ
ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್ ಕಾರ್ಡ್ ಕನೆಕ್ಷನ್’ ಇವೆ ಎಂಬುದನ್ನು ತಿಳಿಯಬೇಕೆ? ಜಸ್ಟ್ ಹೀಗೆ ಮಾಡಿ