Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾಜಿ ನ್ಯಾಯಮೂರ್ತಿಗೇ ಶಾಕ್: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ನಿವೃತ್ತ ಜಡ್ಜ್ ಹೆಸರು ಕಣ್ಮರೆ!

27/03/2026 12:45 PM

BREAKING: ವಿಶ್ವದಾದ್ಯಂತ ಇನ್‌ಸ್ಟಾಗ್ರಾಮ್ ಡೌನ್: ಫೋಟೋ, ರೀಲ್ಸ್ ಲೋಡ್ ಆಗದೆ ಬಳಕೆದಾರರ ಪರದಾಟ!

27/03/2026 12:44 PM

BREAKING : ಭಾರತ ಸೇರಿದಂತೆ ವಿಶ್ವದಾದ್ಯಂತ ‘ಇನ್ ಸ್ಟಾಗ್ರಾಂ’ ಸರ್ವರ್ ಡೌನ್ : ಬಳಕೆದಾರರ ಪರದಾಟ |Instagram Server Down

27/03/2026 12:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 35 ಮೃತ ಸಿಬ್ಬಂದಿಗಳ ಕುಟುಂಬಗಳಿಗೆ 8.22 ಕೋಟಿ ಪರಿಹಾರದ ಚೆಕ್ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
KARNATAKA

35 ಮೃತ ಸಿಬ್ಬಂದಿಗಳ ಕುಟುಂಬಗಳಿಗೆ 8.22 ಕೋಟಿ ಪರಿಹಾರದ ಚೆಕ್ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

By kannadanewsnow0906/03/2026 4:56 PM

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಇತಿಹಾಸದಲ್ಲೇ ಒಂದು ಮಹತ್ವದ ಹೆಜ್ಜೆಯಾಗಿ, ಕರ್ತವ್ಯದ ಅವಧಿಯಲ್ಲಿ ಮತ್ತು ಇತರ ಕಾರಣಗಳಿಂದ ಮೃತಪಟ್ಟ 35 ಸಿಬ್ಬಂದಿಗಳ ಅವಲಂಬಿತರಿಗೆ ಒಟ್ಟು 8.22 ಕೋಟಿ ರೂಪಾಯಿಗಳ ಪರಿಹಾರ ಧನವನ್ನು ಇಂದು ವಿತರಿಸಲಾಯಿತು. ನಿಗಮದ ಕೇಂದ್ರ ಕಛೇರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಚೆಕ್‌ಗಳನ್ನು ಹಸ್ತಾಂತರಿಸಿದರು.

ಪರಿಹಾರ ವಿತರಣೆಯ ವಿವರಗಳು:

ಕಾರ್ಯಕ್ರಮದಲ್ಲಿ ಪರಿಹಾರ ಧನವನ್ನು ಈ ಕೆಳಗಿನಂತೆ ವಿತರಿಸಲಾಯಿತು:

  • ಅಪಘಾತದಿಂದ ಮೃತಪಟ್ಟವರು: ಅಪಘಾತದಿಂದ ಮೃತಪಟ್ಟ 4 ಸಿಬ್ಬಂದಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿಗಳಂತೆ ಒಟ್ಟು 4 ಕೋಟಿ ರೂಪಾಯಿಗಳ ಪರಿಹಾರ ನೀಡಲಾಯಿತು. ಇದು ‘ಸಾರಿಗೆ ಸುರಕ್ಷಾ ವಿಮಾ ಯೋಜನೆ’ಯ ಅಡಿಯಲ್ಲಿ ನೀಡಲಾದ ಅತ್ಯಧಿಕ ಮೊತ್ತದ ಪರಿಹಾರವಾಗಿದೆ.

  • ಇತರೆ ಕಾರಣಗಳಿಂದ ಮೃತಪಟ್ಟವರು: ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮುಂತಾದ ಗಂಭೀರ ಕಾಯಿಲೆಗಳಿಂದ ಮೃತಪಟ್ಟ 28 ಸಿಬ್ಬಂದಿಗಳ ಅವಲಂಬಿತರಿಗೆ ತಲಾ 14 ಲಕ್ಷ ರೂಪಾಯಿಗಳಂತೆ ಒಟ್ಟು 3.92 ಕೋಟಿ ರೂಪಾಯಿಗಳನ್ನು ವಿತರಿಸಲಾಯಿತು.

  • ಹೆಚ್ಚುವರಿ ಪರಿಹಾರ: ಇತರೆ ಮೂರು ಪ್ರಕರಣಗಳಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳಂತೆ ಒಟ್ಟು 30 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಯಿತು.

ಸಾರಿಗೆ ಸಂಸ್ಥೆಯ ಕಲ್ಯಾಣ ಯೋಜನೆಗಳು:

KSRTC ತನ್ನ ನೌಕರರು ಮತ್ತು ಅವರ ಕುಟುಂಬಗಳ ಆರ್ಥಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಎರಡು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಲಾಗಿದೆ:

  1. ಸಾರಿಗೆ ಸುರಕ್ಷಾ ವಿಮಾ ಯೋಜನೆ: ಕರ್ತವ್ಯದಲ್ಲಿರುವಾಗ ಅಥವಾ ಇಲ್ಲದಿರುವಾಗ ಅಪಘಾತದಿಂದ ಮೃತಪಡುವ ಸಿಬ್ಬಂದಿಯ ಕುಟುಂಬಕ್ಕೆ 1 ಕೋಟಿ ರೂಪಾಯಿಗಳ ಆರ್ಥಿಕ ನೆರವು ಒದಗಿಸುವ ಈ ಯೋಜನೆಯಡಿ, ಇದುವರೆಗೆ 34 ಪ್ರಕರಣಗಳಲ್ಲಿ ಒಟ್ಟು 34 ಕೋಟಿ ರೂಪಾಯಿಗಳ ಪರಿಹಾರ ವಿತರಿಸಲಾಗಿದೆ.

  2. ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ: ಅಪಘಾತ ಹೊರತುಪಡಿಸಿ ಇತರ ಕಾರಣಗಳಿಂದ ಮೃತಪಡುವ ನೌಕರರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಕಾಲಕಾಲಕ್ಕೆ ಹೆಚ್ಚಿಸಲಾಗಿದೆ. 1 ನವೆಂಬರ್ 2023 ರಿಂದ ಈ ಮೊತ್ತವನ್ನು 3 ಲಕ್ಷದಿಂದ 10 ಲಕ್ಷಕ್ಕೆ ಮತ್ತು 1 ಸೆಪ್ಟೆಂಬರ್ 2025 ರಿಂದ ಜಾರಿಗೆ ಬರುವಂತೆ 14 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಯೋಜನೆಯಡಿ ಇದುವರೆಗೆ ನೂರಾರು ಕುಟುಂಬಗಳು ಪ್ರಯೋಜನ ಪಡೆದಿವೆ.

ಸಚಿವರ ಭರವಸೆ ಮತ್ತು ಸಲಹೆ:

ಪರಿಹಾರ ವಿತರಣೆಯ ನಂತರ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಮೃತ ಸಿಬ್ಬಂದಿಗಳ ಕುಟುಂಬಗಳಿಗೆ ಸಾಂತ್ವನ ಹೇಳಿದರು. “ನಮ್ಮ ಸಿಬ್ಬಂದಿಗಳ ಅಕಾಲಿಕ ಅಗಲಿಕೆ ನಮಗೆ ತೀವ್ರ ನೋವನ್ನುಂಟು ಮಾಡಿದೆ. ಅವರ ಕುಟುಂಬಗಳೊಂದಿಗೆ ನಾವು ಸದಾ ಇರುತ್ತೇವೆ,” ಎಂದು ಅವರು ಭರವಸೆ ನೀಡಿದರು.

  • ಅನುಕಂಪದ ಆಧಾರದ ಮೇಲೆ ನೇಮಕಾತಿ: ಮೃತರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಚಾಲಕ, ನಿರ್ವಾಹಕ, ಪೇದೆ ಮತ್ತು ತಾಂತ್ರಿಕ ಹುದ್ದೆಗಳಿಗೆ ತ್ವರಿತ ನೇಮಕಾತಿ ಮಾಡಿಕೊಳ್ಳಲಾಗುವುದು. ಅರ್ಹತೆ ಇದ್ದಲ್ಲಿ ಜೇಷ್ಠತೆಯ ಆಧಾರದ ಮೇಲೆ ಕಿರಿಯ ಸಹಾಯಕ ಹುದ್ದೆಗಳಿಗೂ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು. ಇದುವರೆಗೆ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಸುಮಾರು 1400 ಜನರನ್ನು ಈ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ.

  • ಹಣದ ಸದ್ಬಳಕೆಗೆ ಕಿವಿಮಾತು: ಪರಿಹಾರವಾಗಿ ದೊರೆತ ಹಣವನ್ನು ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಅಥವಾ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ (FD) ಇಡುವಂತಹ ಒಳ್ಳೆಯ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಅತಿಯಾದ ಬಡ್ಡಿಯ ಆಸೆಗೆ ಬಿದ್ದು ಬೇರೆಡೆ ಹೂಡಿಕೆ ಮಾಡಿ ಹಣ ಕಳೆದುಕೊಳ್ಳಬೇಡಿ ಮತ್ತು ಯಾವುದೇ ಮಧ್ಯವರ್ತಿಗಳ ಆಮಿಷಕ್ಕೆ ಬಲಿಯಾಗಬೇಡಿ ಎಂದು ಅವರು ಮೃತರ ಕುಟುಂಬದವರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು:

ಈ ಕಾರ್ಯಕ್ರಮದಲ್ಲಿ ಕರಾರಸಾ ನಿಗಮದ ಉಪಾಧ್ಯಕ್ಷರಾದ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕರಾದಅಕ್ರಂ ಪಾಷ (IAS), ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಗಾಯಿತ್ರಿ ಕೆ.ಎಂ. (IAS) ಮತ್ತು ನಿಗಮದ ಇತರ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಿಎಂ ಸಿದ್ಧರಾಮಯ ಮಂಡಿಸಿದ್ದು ನವ ಕರ್ನಾಟಕ ನಿರ್ಮಾಣದ ಬಜೆಟ್: MLC ದಿನೇಶ್ ಗೂಳಿಗೌಡ ಶ್ಲಾಘನೆ

ಸಿಎಂ ಸಿದ್ಧರಾಮಯ್ಯ ಮತ್ತೊಂದು ದಾಖಲೆ: ಸತತ 3 ಗಂಟೆ 30 ನಿಮಿಷ ನಿಂತುಕೊಂಡೇ ಬಜೆಟ್ ಮಂಡನೆ | Karnataka Budget 2026-27

Share. Facebook Twitter LinkedIn WhatsApp Email

Related Posts

ಹೊಸದಾಗಿ `PNG’ ಸಂಪರ್ಕ ಪಡೆಯುವವರಿಗೆ ಭರ್ಜರಿ ಗುಡ್ ನ್ಯೂಸ್ : ರೂ. 500 ವರೆಗೆ ಉಚಿತ ಗ್ಯಾಸ್, ಸೆಕ್ಯೂರಿಟಿ ಫೀಸ್ ಇಲ್ಲ!

27/03/2026 12:29 PM2 Mins Read

ಸಾಗರ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಚುನಾವಣೆ: ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಟಿ.ವಿ ಪಾಂಡುರಂಗ

27/03/2026 12:29 PM2 Mins Read

ALERT : `ಗ್ಯಾಸ್ ಸಿಲಿಂಡರ್’ ಬಳಸುವ ಮುನ್ನ ಎಚ್ಚರ : ತಪ್ಪದೇ ಈ ರೀತಿ ಚೆಕ್ ಮಾಡಿಕೊಳ್ಳಿ ಅದರ ‘ಎಕ್ಸ್‌ ಪೈರಿ ಡೇಟ್’!

27/03/2026 12:20 PM2 Mins Read
Recent News

ಮಾಜಿ ನ್ಯಾಯಮೂರ್ತಿಗೇ ಶಾಕ್: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ನಿವೃತ್ತ ಜಡ್ಜ್ ಹೆಸರು ಕಣ್ಮರೆ!

27/03/2026 12:45 PM

BREAKING: ವಿಶ್ವದಾದ್ಯಂತ ಇನ್‌ಸ್ಟಾಗ್ರಾಮ್ ಡೌನ್: ಫೋಟೋ, ರೀಲ್ಸ್ ಲೋಡ್ ಆಗದೆ ಬಳಕೆದಾರರ ಪರದಾಟ!

27/03/2026 12:44 PM

BREAKING : ಭಾರತ ಸೇರಿದಂತೆ ವಿಶ್ವದಾದ್ಯಂತ ‘ಇನ್ ಸ್ಟಾಗ್ರಾಂ’ ಸರ್ವರ್ ಡೌನ್ : ಬಳಕೆದಾರರ ಪರದಾಟ |Instagram Server Down

27/03/2026 12:44 PM

BREAKING : ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಯೋಧ್ಯೆ : ರಾಮಲಲ್ಲ ಹಣೆಗೆ ಸೂರ್ಯ ರಶ್ಮಿ ತಿಲಕ ನೋಡಿ ಭಕ್ತರ ಹರ್ಷೋದ್ಗಾರ!

27/03/2026 12:41 PM
State News
KARNATAKA

ಹೊಸದಾಗಿ `PNG’ ಸಂಪರ್ಕ ಪಡೆಯುವವರಿಗೆ ಭರ್ಜರಿ ಗುಡ್ ನ್ಯೂಸ್ : ರೂ. 500 ವರೆಗೆ ಉಚಿತ ಗ್ಯಾಸ್, ಸೆಕ್ಯೂರಿಟಿ ಫೀಸ್ ಇಲ್ಲ!

By kannadanewsnow5727/03/2026 12:29 PM KARNATAKA 2 Mins Read

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೂ ದೇಶದಲ್ಲಿ ಇಂಧನ ಪೂರೈಕೆಗೆ ಯಾವುದೇ ಅಡ್ಡಿಯಾಗದಂತೆ ಭಾರತ ಸರ್ಕಾರ ಮಹತ್ವದ…

ಸಾಗರ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಚುನಾವಣೆ: ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಟಿ.ವಿ ಪಾಂಡುರಂಗ

27/03/2026 12:29 PM

ALERT : `ಗ್ಯಾಸ್ ಸಿಲಿಂಡರ್’ ಬಳಸುವ ಮುನ್ನ ಎಚ್ಚರ : ತಪ್ಪದೇ ಈ ರೀತಿ ಚೆಕ್ ಮಾಡಿಕೊಳ್ಳಿ ಅದರ ‘ಎಕ್ಸ್‌ ಪೈರಿ ಡೇಟ್’!

27/03/2026 12:20 PM

ಬೆಂಗಳೂರಲ್ಲಿ ಬರ್ತ್ಡೇ ಪಾರ್ಟಿಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸುಲಿಗೆ : ಐವರು ಆರೋಪಿಗಳು ಅರೆಸ್ಟ್!

27/03/2026 12:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.