ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಶೇ.15ರಷ್ಟು ಟಿಕೆಟ್ ದರ ಹೆಚ್ಚಳದ ಬಿಸಿ ಜನವರಿ 15ರಿಂದಲೇ ಜಾರಿಗೊಳ್ಳಲಿದೆ ಅಂತ ಸಚಿವ ಹೆಚ್.ಕೆ ಪಾಟೀಲ್ ಘೋಷಿಸಿದ್ದಾರೆ.
ಇಂದು ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾರಿಗೆ ಬಸ್ ದರ ಏರಿಕೆಗೆ ಸಂಪುಟ ಸಮ್ಮತಿ ನೀಡಲಾಗಿದೆ. ಶೇ.15% ದರ ಏರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.
ಕೆಎಸ್ ಆರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ, ವಾಯುವ್ಯ ಕರ್ನಾಟಕ ಸಂಸ್ಥೆಗಳ ಬಸ್ ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತಿದೆ. ಜನವರಿ 5ರಿಂದ ಹೊಸ ಟಿಕೆಟ್ ದರ ಜಾರಿಯಾಗಲಿದೆ ಎಂದು ತಿಳಿಸಿದರು.
2015ರಂದು ಟಿಕೆಟ್ ದರ ಏರಿಕೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಏರಿಕೆ ಇರಲಿಲ್ಲ. 2015ರಲ್ಲಿ ಡಿಸೇಲ್ ದರ 60.98 ಇತ್ತು. 9.16 ಕೋಟಿ ಡಿಸೇಲ್ ವೆಚ್ಚ ಇತ್ತು. ಸಿಬ್ಬಂದಿ ವೆಚ್ಷವೂ 12 ರಿಂದ 18.36ಕ್ಕೆ ಏರಿದೆ. ಹೆಚ್ಚುವರಿ ಹೊರೆ ಸಾರಿಗೆ ನಿಗಮಗಳ ಮೇಲಿತ್ತು. ಹಾಗಾಗಿ ಬಸ್ ದರ ಏರಿಕೆ ಅನಿವಾರ್ಯವಾಗಿದೆ ಎಂದರು.
ಸಾರಿಗೆ ಬಸ್ ಟಿಕೆಟ್ ದರ ಶೇ.15ರಷ್ಟು ಹೆಚ್ಚಳದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು ಗೊತ್ತಾ.?