ನವದೆಹಲಿ: ತೃತೀಯ ಲಿಂಗಿಗಳು, ಬೈನರಿ ಅಲ್ಲದ ಮತ್ತು ಇಂಟರ್ಸೆಕ್ಸ್ ಜನರ ಬಗ್ಗೆ ವಿಶ್ವದ ಎಲ್ಲಾ ದೇಶಗಳಲ್ಲಿ ವಿವಿಧ ರೀತಿಯ ಹಕ್ಕಗಳು ಹಾಗೂ ತಾರತಮ್ಯಗಳನ್ನು ನಾವು ಕಾಣಬಹುದಾಗಿದೆ. ತೃತೀಯ ಲಿಂಗಿಗಳು, ಅನೇಕ ದೇಶಗಳು ತಮ್ಮ ಹಕ್ಕುಗಳ ಬಗ್ಗೆಯೂ ಮಾತನಾಡುತ್ತಾರೆ. ಈ ನಡವೆ ದಕ್ಷಿಣ ಅಮೆರಿಕದ ದೇಶ ಪೆರು ಅಧಿಕೃತವಾಗಿ ದೊಡ್ಡ ನಿರ್ಧಾರ ತೆಗೆದುಕೊಂಡಿದೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ದೇಶವು ಅಧಿಕೃತವಾಗಿ ತೃತೀಯ ಲಿಂಗಿಗಳು, ಬೈನರಿ ಅಲ್ಲದ ಮತ್ತು ಇಂಟರ್ಸೆಕ್ಸ್ ಜನರನ್ನು ‘ಮಾನಸಿಕ ಅಸ್ವಸ್ಥರು’ ಎಂದು ಘೋಷಿಸಿದೆ. ಈ ಮೂಲಕ ಅವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿಯೂ ಹೇಳಲಾಗಿದೆ. ದೇಶದ ಸಾರ್ವಜನಿಕ ಆರೋಗ್ಯ ಸೇವೆಗಳು ಟ್ರಾನ್ಸ್ ಸಮುದಾಯಕ್ಕೆ ಹರಿಯುವುದನ್ನು ಖಚಿತಪಡಿಸಿಕೊಳ್ಳಲು, “ಅವರ ಮಾನಸಿಕ ಆರೋಗ್ಯಕ್ಕಾಗಿ ವೈದ್ಯಕೀಯ ಆರೈಕೆಯ ಸಂಪೂರ್ಣ ವ್ಯಾಪ್ತಿಯನ್ನು ಖಾತರಿಪಡಿಸಲು” ವಿವಾದಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪೆರುವಿನ ಆರೋಗ್ಯ ಸಚಿವಾಲಯ ಹೇಳಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.