ಶಿವಮೊಗ್ಗ: ರೈತರ ಕೃಷಿ ಪಂಪ್ ಸೆಟ್ ಗಳಿಗೆ ಪಡೆದಿದ್ದಂತ ವಿದ್ಯುತ್ ಸಂಪರ್ಕವನ್ನೇ ಏಕಾಏಕಿ ಕತ್ತರಿಸಿ, ಬೆಳೆ ಒಣಗುವಂತೆ ಮಾಡಿದ್ದಾರೆ. ಮೆಸ್ಕಾಂ ಅಧಿಕಾರಿಗಳ ಈ ನಿರ್ಧಾರದಿಂದ ರೈತರ ಬೆಳೆ ಒಣಗುತ್ತಿದೆ. ಈ ನಡೆಯನ್ನು ತೋರಿದಂತ ಜೋಗ ವಿಭಾಗದ ಮೆಸ್ಕಾಂ ಎಇಇ ಪ್ರವೀಣ್, ಜೆಇ ನಿರಂಜನ್ ಎಂಬುವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ರೈತ ಮುಖಂಡ ಎಂ.ಬಿ ಮಂಜಪ್ಪ ಹಿರೆನೆಲ್ಲೂರು ಆಗ್ರಹಿಸಿದರು.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರದ ತಾಳಗುಪ್ಪ ಹೋಬಳಿಯ, ಶಿರವಂತೆ ಗೋಳಗೋಡು ಎಸ್ ಟಿ ಕಾಲೋನಿಯಲ್ಲಿ ಟಿಸಿ ಸುಟ್ಟು ಹೋಗಿ 15 ದಿನಗಳಾಗಿತ್ತು. ಇನ್ನೂ ಅಳವಡಿಸಿಲ್ಲ ಅಂತ ರೊಚ್ಚಿಗೆದ್ದ ಜನರು ಮೇಲಧಿಕಾರಿಗಳಿಗೆ ಪೋನ್ ಮಾಡಿ, ಜನರಿಗೆ ಕುಡಿಯೋದಕ್ಕೆ ನೀರಿನ ಸಮಸ್ಯೆ ಆಗಿದೆ. ಟಿಸಿ ಹಾಕಿಸುವಂತೆ ಒತ್ತಾಯಿಸಿದ್ದರ ಪರಿಣಾಮ, ಟಿಸಿ ಹಾಕಿದ್ದಾರೆ ಎಂದರು.
ಟಿಸಿ ಹಾಕದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಿದ್ದಕ್ಕೆ ಜೋಗದ ಎಇಇ(ಇ) ಪ್ರವೀಣ್ ಮತ್ತು ಜೆಇ ನಿರಂಜನ್ ಸಿಟ್ಟಿಗೆದ್ದು, ರೈತರ ಕೃಷಿ ಪಂಪ್ ಸೆಂಟ್ ಸಂಪರ್ಕ ಕಟ್ ಮಾಡಿದ್ದಾರೆ. ಇದರಿಂದಾಗಿ ರೈತರ ಬೆಳೆ ಒಣಗುತ್ತಿದೆ. ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಏಕೆ ಅಂತ ಪ್ರಶ್ನಿಸಿದರೇ ಯಾರೊಬ್ಬರೂ ಸರಿಯಾಗಿ ಪ್ರತ್ಯುತ್ತರ ನೀಡುತ್ತಿಲ್ಲ ಎಂಬುದಾಗಿ ಹೇಳಿದರು.
ರೈತರು ಕೃಷಿ ಪಂಪ್ ಸೆಟ್ ಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರೂ ಸಕ್ರಮಕ್ಕೆ ಅವಕಾಶವಿದೆ. ಆ ಕೆಲಸವನ್ನು ಮಾಡದೇ, ಮೇಲಧಿಕಾರಿಗಳಿಗೆ ದೂರು ನೀಡಿದ್ರು ಅನ್ನೋ ಕಾರಣಕ್ಕೆ ದುಂಡಾವರ್ತನೆಯನ್ನು ಪ್ರವೀಣ್, ನಿಂರಜನ್ ತೋರಿದ್ದಾರೆ. ಅವರನ್ನು ಕೂಡಲೇ ಜೋಗ ವಿಭಾಗದ ಮೆಸ್ಕಾಂ ಕೆಲಸದಿಂದ ಬೇರಡೆಗೆ ವರ್ಗಾವಣೆ ಮಾಡಬೇಕು. ಒಂದು ವೇಳೆ ವರ್ಗಾವಣೆ ಮಾಡದೇ ಇದ್ದರೇ ಸಚಿವ ಮಧು ಬಂಗಾರಪ್ಪ, ಶಾಸಕರಾದಂತ ಗೋಪಾಲಕೃಷ್ಣ ಬೇಳೂರು ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಾಗರ, ಹೊಸನಗರ ಎರಡು ಸೇರಿ ಒಂದೇ ಟಿಸಿ ರಿಪೇರಿ ಕೇಂದ್ರವಿದೆ. ಇದರಿಂದ ಟಿಸಿ ಸುಟ್ಟಾಗ ತ್ವರಿತವಾಗಿ ರಿಪೇರಿ ಕೆಲಸ ಆಗದೇ ರೈತರಿಗೆ ಸಕಾಲಕ್ಕೆ ಟಿಸಿ ಸಿಗದೇ ಬೆಳೆಗಳು ಒಣಗುವಂತೆ ಆಗುತ್ತಿದೆ. ಈ ಬಗ್ಗೆ ಶಾಸಕರು, ಸಚಿವರು ಗಮನಿಸಬೇಕು. ಹೋಬಳಿಗೊಂದು ಟಿಸಿ ರಿಪೇರಿ ಕೇಂದ್ರವನ್ನು ತೆರೆಯುವಂತ ವ್ಯವಸ್ಥೆ ಮಾಡಬೇಕು ಅಂತ ಒತ್ತಾಯಿಸಿದರು.
ರೈತರು ವಿದ್ಯುತ್ ಸಮಸ್ಯೆ ಸಂಬಂಧಿಸಿದಂತ ಕರೆ ಮಾಡಿದರೇ ಮೆಸ್ಕಾಂ ಅಧಿಕಾರಿಗಳು ಸ್ವೀಕರಿಸೋದಿಲ್ಲ. ವಿದ್ಯುತ್ ಸರಬರಾಜಿನಲ್ಲಿ ವೋಲ್ಟೇಜ್ ಇಲ್ಲದೇ ಟಿಸಿ ಸುಡುತ್ತಿವೆ. ಈ ಸಮಸ್ಯೆ ನಿವಾರಿಸುವಂತೆ ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಂ.ಬಿ ಮಂಜಪ್ಪ ಹಿರೆನೆಲ್ಲೂರು ಆಗ್ರಹಿಸಿದರು.
ವರದಿ: ವಸಂತ ಬಿ ಈಶ್ವರಗೆರೆ
BREAKING:ಪರ್ವೇಶ್ ವರ್ಮಾ ದೆಹಲಿ ಸಿಎಂ ಆಗ್ತಾರಾ? ಬಿಜೆಪಿ ಅಭ್ಯರ್ಥಿ ಯಾರು | Delhi CM Announcement
BREAKING NEWS : ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ಕೊಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ