Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಮೈಸೂರಿನಲ್ಲಿ ಸಾಹಿತಿ `ಎಸ್.ಎಲ್ ಭೈರಪ್ಪ’ ಅಂತ್ಯಕ್ರಿಯೆ

26/09/2025 5:37 AM

ರಾಜ್ಯ ಸರ್ಕಾರಿ ನೌಕರರ `ಮುಂಬಡ್ತಿ’ಗೆ ತರಬೇತಿ ಕಡ್ಡಾಯ : ಸಚಿವ ಸಂಪುಟ ಅನುಮೋದನೆ

26/09/2025 5:31 AM

ಬೆಳ್ಳುಳ್ಳಿ ಸಿಪ್ಪೆ ನಿಷ್ಪ್ರಯೋಜಕವಲ್ಲ, ಆ ಸಮಸ್ಯೆಗಳಿಗೆ ರಾಮಬಾಣ

25/09/2025 10:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರಿ ನೌಕರರ `ಮುಂಬಡ್ತಿ’ಗೆ ತರಬೇತಿ ಕಡ್ಡಾಯ : ಸಚಿವ ಸಂಪುಟ ಅನುಮೋದನೆ
KARNATAKA

ರಾಜ್ಯ ಸರ್ಕಾರಿ ನೌಕರರ `ಮುಂಬಡ್ತಿ’ಗೆ ತರಬೇತಿ ಕಡ್ಡಾಯ : ಸಚಿವ ಸಂಪುಟ ಅನುಮೋದನೆ

By kannadanewsnow5726/09/2025 5:31 AM

ಬೆಂಗಳೂರು: ರಾಜ್ಯ ಸರಕಾರದ ‘ಸಿ’ ವೃಂದದ ಮೇಲ್ಪಟ್ಟ ಎಲ್ಲ ಅಧಿಕಾರಿ, ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯಗೊಳಿಸುವ ಸಂಬಂಧದ ನಿಯಮಾವಳಿ ಅಂತಿಮಗೊಳಿಸಲಾಗಿದ್ದು, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.

ರಾಜ್ಯ ಸರಕಾರದ ‘ಸಿ’ ವೃಂದ ಮೇಲ್ಪಟ್ಟ ಎಲ್ಲ ಅಧಿಕಾರಿ, ನೌಕರರಿಗೆ ಮುಂಬಡ್ತಿಗೆ ತರಬೇತಿ ಕಡ್ಡಾಯಗೊಳಿಸುವ ಮಹತ್ವದ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ. ಕೇಂದ್ರ ನಾಗರಿಕ ಸೇವಾ ಅಧಿ ಕಾರಿಗಳಿಗೆ ಸೇವಾವಧಿ ನಡುವೆ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ತರಬೇತಿ ವ್ಯವಸ್ಥೆ ಇದ್ದು, ಅದೇ ಮಾದರಿಯಲ್ಲಿ ರಾಜ್ಯ ಸರಕಾರದ ಎಲ್ಲ ಅಧಿಕಾರಿ ವರ್ಗಕ್ಕೆ ತರಬೇತಿಗೆ ನಿರ್ಧರಿಸಲಾಗಿದೆ. ಮುಂಬಡ್ತಿಗಾಗಿ ಈ ತರಬೇತಿಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಮುಂಬಡ್ತಿಗಾಗಿ ಕಡ್ಡಾಯ ತರಬೇತಿ) ನಿಯಮಗಳು 2025ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಉನ್ನತ ಶಿಕ್ಷಣ ಇಲಾಖೆಯಡಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ 2ನೇ ಆವೃತ್ತಿ (UUCMS-V-2.0) ಯನ್ನು ರೂ.40.29 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿಯಡಿಯಲ್ಲಿ 110 ಜಂಕ್ಷನ್ ಗಳಲ್ಲಿ ಬೆಂಗಳೂರು ನಗರಕ್ಕೆ ಅವಶ್ಯಕವಿರುವ ಟ್ರಾಫಿಕ್ ಸಿಗ್ನಲ್ ಗಳನ್ನು ರೂ. 56.45 ಕೋಟಿಗಳ ಅಂದಾಜು ಅನುಷ್ಠಾನಗೊಳಿಸಲು ಅನುಮತಿಯನ್ನು ಸಚಿವ ಸಂಪುಟ ನೀಡಿದೆ.

ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ-2025-32ಕ್ಕೆ ಅನುಮೋದನೆ ನೀಡಿದೆ. ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತು.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪ್ರಸ್ತುತ ಇರುವ 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಮೊದಲನೇ ಹಂತದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ರೂ.95.60 ಕೋಟಿಗಳ ಅಂದಾಜು ಮೊತ್ತದಲ್ಲಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

PM-ABHIM & Re-appropriate anticipated saving budget during 2021-26 ರಡಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಿರ್ಮಿಸಲು ಮಂಜೂರಾಗಿರುವ 50 ಹಾಸಿಗೆಗಳ ತೀವು ನಿಗಾ ಆರೈಕೆ ಘಟಕವನ್ನು (CCB) ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಿ, ಅಂದಾಜು ಮೊತ್ತ ರೂ.23.75 ಕೋಟಿಗಳಲ್ಲಿ (ಕಟ್ಟಡ + ವೈದ್ಯಕೀಯ ಉಪಕರಣ) ನಿರ್ಮಿಸಲು ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಯೋಜನೆಯಡಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ವಿಸ್ತರಣೆ ಹಾಗೂ ಆಧುನೀಕರಣದ ರೂ.329.00 ಕೋಟಿಗಳ ಪರಿಷ್ಕೃತ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ. ಕಡೂರು ತಾಲ್ಲೂಕಿನಲ್ಲಿ ಹೊಸದಾಗಿ ತಾಲ್ಲೂಕು ಪ್ರಜಾಸೌಧ ಕಟ್ಟಡವನ್ನು (Type-C ಮಾದರಿ) ರೂ.16.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

“ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025″ಕ್ಕೆ ಅನುಮೋದನೆಯನ್ನು ಸರ್ಕಾರ ನೀಡಿದೆ.

“ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ, 2025″ಕ್ಕೆ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರಕ್ಕೆ 2ನೇ ಹಂತದ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆಯ ರೂ.128.74 ಕೋಟಿಗಳ ವಿಸ್ತ್ರತ ಯೋಜನಾ ವರದಿಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಘಟಕದ ಅಧೀನದಲ್ಲಿ ಹೊಸದಾಗಿ ಸ್ಥಾಪಿಸಿರುವ ಎರಡು ಐ.ಆರ್.ಬಿ ಪಡೆಗಳಿಗೆ ಅವಶ್ಯಕವಿರುವ ಮೂಲಭೂತ ವಸತಿ/ವಸತಿಯೇತರ ಸೌಕರ್ಯಗಳನ್ನು ರೂ.60.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಲ್ಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಇನ್‌ಟ್ಯೂಟ್ ಆಫ್ ಗ್ಯಾಸ್ಟೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್, ಬೆಂಗಳೂರು ಸಂಸ್ಥೆಗೆ ಅವಶ್ಯವಿರುವ ರೋಬೋಟಿಕ್ ವೈದ್ಯಕೀಯ ಉಪಕರಣವನ್ನು ರೂ.20.00 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಬಾಗಲಕೋಟೆ ಇಲ್ಲಿ 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಭಿಸಲು ಅವಶ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, ಬಾಲಕ, ಬಾಲಕಿಯರ ಹಾಸ್ಟೆಲ್‌ಗಳು, ಬೋಧಕ ಸಿಬ್ಬಂದಿಗಳ ವಸತಿಗೃಹಗಳು ಹಾಗೂ ಇತರೆ ಪೂರಕವಾದ ಕಾಮಗಾರಿಗಳಿಗೆ ಅವಶ್ಯವಿರುವ ರೂ.450.00 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ GRP (Glass Reinforced Plastic pipe) ರೈಸಿಂಗ್ ಮೇನ್ ಸೇರಿ ರಾಜಕಾಲುವೆಯ ಬಳಿಯ Used Water Treatment Plant ಆವರಣದಲ್ಲಿರುವ ಸಂಸ್ಕರಿಸಿದ ನೀರಿನ ಪಂಪಿಂಗ್ ಸ್ಟೇಷನ್, ದೇವನಹಳ್ಳಿ ಬಳಿಯ ಐಟಿ ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿರುವ 40 MLD ಸಾಮರ್ಥ್ಯದ ತೃತೀಯ ಹಂತದ ಸಂಸ್ಕರಣಾ ಘಟಕದ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ರೂ.45.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಎಲೆಮಲ್ಲಪ್ಪ ಚೆಟ್ಟಿಯಲ್ಲಿರುವ 15 ದ.ಲ.ಲೀ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ದೀಕರಣ ಘಟಕವನ್ನು ಮತ್ತು ಸಾದರಮಂಗಲದಲ್ಲಿ 5 ದ.ಲ.ಲೀ ಸಾಮರ್ಥ್ಯದ ISPS (Intermediate Sewage Pumping Station) ಮತ್ತು ಸುಮಾರು 3.5 ಕಿ.ಮೀಗಳ 450mm dia DI (Ductile Iron) ಪೈಪ್ ಲೈನ್ ನ 5 ವರ್ಷಗಳ ಸಮಗ್ರ ಕಾರ್ಯಚರಣೆ ಮತ್ತು ನಿರ್ವಹಣೆ (O&M)ಯನ್ನು ರೂ.19.07 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 90 ದ.ಲ.ಲೀ ಸಾಮರ್ಥ್ಯದ ಬೆಳ್ಳಂದೂರು ತ್ಯಾಜ್ಯ ನೀರು ಶುದ್ದೀಕರಣ ಘಟಕದ 5 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಯನ್ನು ರೂ.23.36 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಹೊರಮಾವುನಲ್ಲಿರುವ 20 MLD ಬಳಸಿದ ನೀರು ಸಂಸ್ಕರಣಾ ಘಟಕವನ್ನು (UWTP) 05 ವರ್ಷಗಳ ಅವಧಿಗೆ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ರೂ.15.00 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಕೋಟಿಗಳ ಅನುಮೋದನೆ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಕಲಂ 241(7) ಅವಕಾಶದಡಿ 1200 ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಿದೆ.

ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಿಪಿಪಿ ಮಾದರಿಯಲ್ಲಿ ಪ್ರತಿನಿತ್ಯ 1750 ಮೆ. ಟನ್ ಕಟ್ಟಡಗಳ ಹಾಗೂ ನಿರ್ಮಾಣ ಸಾಮಗ್ರಿಗಳ ಭಗ್ನಾವಶೇಷ ತ್ಯಾಜ್ಯದ ಸಂಗ್ರಹಣೆ ಮತ್ತು ವಿಲೇವಾರಿ ಮಾಡುವ (750 ಟಿಪಿಡಿಯ ಒಂದು ಪ್ಯಾಕೇಜ್ ಹಾಗೂ 500 ಟಿಪಿಡಿಯ ಎರಡು ಪ್ಯಾಕೇಜ್) ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಮತ್ತು ಟೆಂಡರ್ ಅನುಮೋದನೆ ನೀಡಿದೆ.

ಗಣಪತಿ ಆತ್ಮಹತ್ಯೆ ಕೇಶವನಾರಾಯಣ ಆಯೋಗದ ವರದಿ ತಿರಸ್ಕಾರ:

ಕೆ.ಎನ್‌. ಕೇಶವನಾರಾಯಣ, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಇವರ ವಿಚಾರಣಾ ವರದಿಯನ್ನು ಸಚಿವ ಸಂಪುಟವು ಭಾಗಶ: ಒಪ್ಪಿ, ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆಯ ಶಿಫಾರಸ್ಸನು ತಿರಸ್ಕರಿಸಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ #CabinetDecisions pic.twitter.com/UsoJYTRmHi

— CM of Karnataka (@CMofKarnataka) September 25, 2025

Training rules mandatory for state government employees' promotion: Cabinet approves
Share. Facebook Twitter LinkedIn WhatsApp Email

Related Posts

ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಮೈಸೂರಿನಲ್ಲಿ ಸಾಹಿತಿ `ಎಸ್.ಎಲ್ ಭೈರಪ್ಪ’ ಅಂತ್ಯಕ್ರಿಯೆ

26/09/2025 5:37 AM1 Min Read

BREAKING: ರಾಜ್ಯದ ‘SSLC ವಿದ್ಯಾರ್ಥಿ’ಗಳಿಗೆ ಬಿಗ್ ಶಾಕ್: ‘ಪರೀಕ್ಷಾ ಶುಲ್ಕ’ ಹೆಚ್ಚಳ | SSLC Exam Fee Hike

25/09/2025 9:30 PM1 Min Read

ಸಾಗರದ ಜನತೆಗೆ ಗುಡ್ ನ್ಯೂಸ್: 3 ಕೋಟಿ ವೆಚ್ಚದಲ್ಲಿ ‘KSRTC ಬಸ್ ನಿಲ್ದಾಣ ಮೇಲ್ದರ್ಜೆ ಕಾಮಗಾರಿ’ಗೆ ಸರ್ಕಾರ ಗ್ರೀನ್ ಸಿಗ್ನಲ್

25/09/2025 9:22 PM2 Mins Read
Recent News

ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಮೈಸೂರಿನಲ್ಲಿ ಸಾಹಿತಿ `ಎಸ್.ಎಲ್ ಭೈರಪ್ಪ’ ಅಂತ್ಯಕ್ರಿಯೆ

26/09/2025 5:37 AM

ರಾಜ್ಯ ಸರ್ಕಾರಿ ನೌಕರರ `ಮುಂಬಡ್ತಿ’ಗೆ ತರಬೇತಿ ಕಡ್ಡಾಯ : ಸಚಿವ ಸಂಪುಟ ಅನುಮೋದನೆ

26/09/2025 5:31 AM

ಬೆಳ್ಳುಳ್ಳಿ ಸಿಪ್ಪೆ ನಿಷ್ಪ್ರಯೋಜಕವಲ್ಲ, ಆ ಸಮಸ್ಯೆಗಳಿಗೆ ರಾಮಬಾಣ

25/09/2025 10:06 PM

ರಷ್ಯಾದಲ್ಲಿ ಇಂಧನ ಖಾಲಿಯಾಗ್ತಿದ್ಯಾ.? ಉಕ್ರೇನ್ ಡ್ರೋನ್ ದಾಳಿ ಬಳಿಕ ಕ್ರೆಮ್ಲಿನ್ ರಫ್ತು ನಿಷೇಧ

25/09/2025 9:51 PM
State News
KARNATAKA

ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಮೈಸೂರಿನಲ್ಲಿ ಸಾಹಿತಿ `ಎಸ್.ಎಲ್ ಭೈರಪ್ಪ’ ಅಂತ್ಯಕ್ರಿಯೆ

By kannadanewsnow5726/09/2025 5:37 AM KARNATAKA 1 Min Read

ಮೈಸೂರು: ಇಂದು ಬೆಳಗ್ಗೆ 8.30ಕ್ಕೆ 8.30ಕ್ಕೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆದು,…

ರಾಜ್ಯ ಸರ್ಕಾರಿ ನೌಕರರ `ಮುಂಬಡ್ತಿ’ಗೆ ತರಬೇತಿ ಕಡ್ಡಾಯ : ಸಚಿವ ಸಂಪುಟ ಅನುಮೋದನೆ

26/09/2025 5:31 AM

BREAKING: ರಾಜ್ಯದ ‘SSLC ವಿದ್ಯಾರ್ಥಿ’ಗಳಿಗೆ ಬಿಗ್ ಶಾಕ್: ‘ಪರೀಕ್ಷಾ ಶುಲ್ಕ’ ಹೆಚ್ಚಳ | SSLC Exam Fee Hike

25/09/2025 9:30 PM

ಸಾಗರದ ಜನತೆಗೆ ಗುಡ್ ನ್ಯೂಸ್: 3 ಕೋಟಿ ವೆಚ್ಚದಲ್ಲಿ ‘KSRTC ಬಸ್ ನಿಲ್ದಾಣ ಮೇಲ್ದರ್ಜೆ ಕಾಮಗಾರಿ’ಗೆ ಸರ್ಕಾರ ಗ್ರೀನ್ ಸಿಗ್ನಲ್

25/09/2025 9:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.