ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಬೆಳ್ಳಂದೂರು ಯಾರ್ಡ್ ನ ಪುನರ್ನಿರ್ಮಾಣಕ್ಕಾಗಿ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳ ಸಂಚಾರ ತಾತ್ಕಾಲಿಕ ರದ್ದು ಮತ್ತು ನಿಯಂತ್ರಿಸಲಾಗುತ್ತಿದೆ. ಅವುಗಳ ವಿವರ ಕೆಳಗಿನಂತಿವೆ:
ರದ್ದು: ಯಶವಂತಪುರ-ಹೊಸೂರು ಮೆಮು (06203) ಮತ್ತು ಹೊಸೂರು-ಯಶವಂತಪುರ ಮೆಮು (06204) ವಿಶೇಷ ರೈಲುಗಳ ಸಂಚಾರ ಡಿಸೆಂಬರ್ 5 ರಂದು ರದ್ದುಗೊಳ್ಳಲಿದೆ.
ನಿಯಂತ್ರಣ: ಡಿಸೆಂಬರ್ 5 ರಂದು ತಮ್ಮ ಮೂಲ ನಿಲ್ದಾಣದಿಂದ ಹೊರಡುವ ರೈಲುಗಳ ಸಂಖ್ಯೆ 11014 ಕೊಯಮತ್ತೂರು-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 90 ನಿಮಿಷ, ರೈಲು ಸಂಖ್ಯೆ 06393 ಯಶವಂತಪುರ-ಹೊಸೂರು ಮೆಮು ವಿಶೇಷ ರೈಲು ಮಾರ್ಗ ಮಧ್ಯದಲ್ಲಿ 60 ನಿಮಿಷಗಳ ಮತ್ತು ರೈಲು ಸಂಖ್ಯೆ 16211 ಯಶವಂತಪುರ-ಸೇಲಂ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 10 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.